-->

ತೋಕೂರು: ಧಾರ್ಮಿಕ ಸಭೆ,ಸಮ್ಮಾನ

ತೋಕೂರು: ಧಾರ್ಮಿಕ ಸಭೆ,ಸಮ್ಮಾನ

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರಗಳನ್ನು ಪುನರುತ್ಥಾನದ ಯೋಗ ಭಾಗ್ಯವನ್ನು ಕಂಡಿರುವ ನಾವು, ಗ್ರಾಮದಲ್ಲಿ ಧರ್ಮ ಜಾಗೃತಿಯ ಬದಲಾವಣೆಯೊಂದಿಗೆ ಹೊಸ ಪೀಳಿಗೆಗೆ ನಮ್ಮತನವನ್ನು ಮನನ ಮಾಡುವಂತಹ ಕೆಲಸ ಕ್ಷೇತ್ರದಲ್ಲಿ ನಿರಂತರವಾಗಿ ಸಂರಕ್ಷಣೆಯೊಂದಿಗೆ ನಡೆಯಬೇಕು ಆಗ ಮಾತ್ರ ಧರ್ಮ ಉಳಿಯುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಧಾನದ ಅಷ್ಟಬಂಧ ಬ್ರಹ್ಮಕುಂಭಾಭೀಷೇಕ ಹಾಗೂ ನಾಗಮಂಡಲೋತ್ಸವದ ಅಂಗವಾಗಿ ಸ್ಕಂದ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಅನುಗ್ರಹ ಸಂದೇಶವನ್ನು ನೀಡಿದರು.
ಮಾಜಿ ಧಾರ್ಮಿಕ ದತ್ತಿ ಇಲಾಖೆಯ ಸಚಿವ ಬಿ. ನಾಗರಾಜ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. 
ಧಾರ್ಮಿಕ ಚಿಂತಕ ವೆ.ಮೂ.ಕೊಲಕಾಡಿ ವಾದಿರಾಜ ಭಟ್ ಅವರು ನಾಗಮಂಡಲ-ನಾಗರಾಧನೆ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
 
ಈ ಸಂದರ್ಭದಲ್ಲಿ ದೇವಳಕ್ಕೆ ವಿಶೇಷವಾಗಿ ಸಹಕರಿಸಿದ ಪಾಕತಜ್ಞ ವೆಂಕಟೇಶ್ ಭಟ್ ಪಾವಂಜೆ, ಅಚ್ಯುತರಾವ್ ಪಾವಂಜೆ, ತೋಕೂರುಗುತ್ತು ಉಮೇಶ್ ಶೆಟ್ಟಿ ದಂಪತಿ, ಹಾಗೂ ಶಶಿಧರ ಶೆಟ್ಟಿ ಸಹೋದರರು, ಪಿ.ಪದ್ಮನಾಭ ಆಚಾರ್ಯ, ವೆಂಕಟೇಶ್ ಭಟ್, ಟಿ.ಕೆ. ವ್ಯಾಸರಾವ್ ಮಜಿಗುತ್ತು, ಡಾ. ವಿಶಾಲ್‌ರಾವ್, 
ನಾರಾಯಣ್ ಸಾಲಿಯಾನ್ ನೇಲ್ಯಇಲ್ ಕುಲಾಲ ಕುಟುಂಬಸ್ಥರು, ವಿಷ್ಣುಮೂರ್ತಿ ಭಟ್ ಎಲ್ಲೂರು, ರತ್ನಾಕರ್ ಶೆಟ್ಟಿಗಾರ್ ಕಲ್ಲಾಪು ಸಹೋದರರು, ಪುತ್ತಿಲ ಪರಿವಾರದ ಅರುಣ್‌ಕುಮಾರ್ ಪುತ್ತಿಲ ಅವರನ್ನು ಗೌರವಿಸಲಾಯಿತು.
ಉಡುಪಿ ವಾಸುಕಿ ಶ್ರೀ ಸುಬ್ರಹ್ಮಣ್ಯ ದೇವಸ್ಧಾನದ ಸಗ್ರಿ ಗೋಪಾಲಕೃಷ್ಣ ಸಾಮಗ, ಉದ್ಯಮಿ ರವಿ ದೇವಾಡಿಗ, ಸಾಹಿತಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು, ಕಬಡ್ಡಿ ಕ್ರೀಡಾಪಟು ರಿಷಾಂಕ್ ಕೆ. ದೇವಾಡಿಗ, ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸಮಿತಿಯ ಭುವನಾಭಿರಾಮ ಉಡುಪ, ಮುದಲೇಮಾರ್ ವಿಜಯಕುಮಾರ್ ರೈ, ಟಿ. ಪುರುಷೋತ್ತಮ ರಾವ್, ಲೋಕಯ್ಯ ಕೆ. ಸಾಲ್ಯಾನ್, ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು, ವ್ಯವಸ್ಧಾಪನ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಪರಿಚಯಿಸಿದರು, ಕಾರ್ಯದರ್ಶಿ ರಾಮಣ್ಣ ದೇವಾಡಿಗ ಪ್ರಸ್ತಾವನೆಗೈದರು, ಹೇಮನಾಥ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807