ತೋಕೂರು ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕುಂಭಾಭಿಷೇಕ
Monday, May 22, 2023
ಕಿನ್ನಿಗೋಳಿ : ಸಂಪೂರ್ಣವಾಗಿ ಜೀರ್ಣೋದ್ದಾರ ಗೊಂಡಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರದಂದು ಬೆಳಿಗ್ಗೆ 5.45ರ ಮೇಷ ಲಗ್ನ ಸುಮೂರ್ತದಲ್ಲಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಅರ್ಚಕ ಮಧುಸೂದನ ಆಚಾರ್ಯ ನೇತೃತ್ವದಲ್ಲಿ ಶ್ರೀ ದೇವರಿಗೆ ಸುಬ್ರಹ್ಮಣ್ಯ ಸಹಸ್ರನಾಮ ಮಂತ್ರ ಹೋಮ, ಬ್ರಹ್ಮಕುಂಬಾಭಿಷೇಕ, ವಿಜೃಂಭಣೆಯಿಂದ ನಡೆಯಿತು.
ಕಲಾಶಾಭಿಷೇಕ, ಪ್ರಸನ್ನಪೂಜೆ, ನ್ಯಾಸಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಹಗಲು ರಥೋತ್ಸವ, ಪಲ್ಲಪೂಜೆ, ಪ್ರಸನ್ನಪೂಜೆ, ಮಹಾ ಅನ್ನಂತರ್ಪಣೆ, ಉತ್ಸವಬಲಿ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಿತು.
ಈ ಸಂದರ್ಭ ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು,
ಶಾಸಕರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮಾನಾಥ ಎ. ಕೋಟ್ಯಾನ್, ವೇ.ಮೂ. ಕೃಷ್ಣ ಭಟ್ ಪಾವಂಜೆ, ಅತ್ತೂರು ಬೈಲು ವೆಂಕಟರಾಜ ಉಡುಪ, ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರುಗಳಾದ ಡಾ. ಹರಿಕೃಷ್ಣ ಪುನರೂರು, ಸಂತೋಷ್ ಕುಮಾರ್ ಹೆಗ್ಡೆ, ಹರಿದಾಸ್ ಭಟ್ ತೋಕೂರು, ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ, ಎಸ್‌ಕೆಪಿಎ ಸಂಸ್ಥೆಯ ಮೋಹನ್ ರಾವ್, ದೀಪಕ್, ವಿನೋದ್ ಸುವರ್ಣ, ಪರಮೇಶ್ವರ್ ಶೆಟ್ಟಿಗಾರ್ ತೋಕೂರು, ಧರ್ಮಾನಂದ ಶೆಟ್ಟಿಗಾರ್, ಮೊಹಮ್ಮದ್ ಯೂನಸ್ ತೋಕೂರು ಸಮಿತಿಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.