ತೋಕೂರಿನಲ್ಲಿ ತೋರಣ ಮುಹೂರ್ತಕ್ಕೆ ಚಾಲನೆ
Thursday, May 11, 2023
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಪುನಃಪ್ರತಿಷ್ಠೆಬ್ರಹ್ಮಕುಂಭಾಭಿಷೇಕ ಹಾಗೂ ನಾಗಮಂಡಲೋತ್ಸವದ ಪ್ರಯುಕ್ತ ನಡೆದ ತೋರಣ ಮುಹೂರ್ತಕ್ಕೆ ಉಡುಪಿ ಪಲಿಮಾರು ಶ್ರೀ ಹೃಷಿಕೇಶ ತೀರ್ಥ ಮೂಲ ಮಹಾ ಸಂಸ್ಥಾನದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಭಕ್ತರು ಶ್ರದ್ದೆಯಿಂದ ಸಲ್ಲಿಸುವ ಸೇವೆ ಯಿಂದ ಭಗವಂತನ ಕೃಪೆ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ.ದೇವಸ್ಥಾನದ ಪ್ರಗತಿ ಗ್ರಾಮದ ಅಭಿವೃದ್ದಿಯ ಸಂಕೇತ ಎಂದು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇ.ಮೂ.ವಾಸುದೇವ ಆಸ್ರಣ್ಣ ಅವರು ಅನ್ನಸಂತರ್ಪಣೆಯ ಉಗ್ರಾಣ ಮುಹೂರ್ತವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ, ಪುಣ್ಯಾಹವಾಹನ, ದೇವನಾಂದಿ, ಅಚಾರ್ಯಾದಿ ಋತ್ವಿಗ್ವರಣ, ಅರಣಿಮಥನ, ಭದ್ರದೀಪ ಪ್ರತಿಷ್ಠೆ, ಗಣಯಾಗ, ಕಂಕಣಬಂಧ, ಚತುರ್ವೇಧ ನಾರಾಯಣ ಆರಂಭ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಪ್ತಶುದ್ಧಿ ಪ್ರಾದಾಸ ಶುದ್ಧಿ, ಮಂಟಪ ಸಂಸ್ಕಾರ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನ ಜರಗಿತು.
ದೇವಳದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಧಾರ್ಮಿಕ ಚಿಂತಕ ವಿದ್ವಾನ್ ಪಂಜ ಭಾಸ್ಕರ ಭಟ್, ಅರ್ಚಕ ಮಧುಸೂಧನ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಮೋಹನ್‌ದಾಸ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿಜಯಕುಮಾರ್ ರೈ, ಟಿ.ಪುರುಷೋತ್ತಮ ರಾವ್, ಲೋಕಯ್ಯ ಕೆ. ಸಾಲ್ಯಾನ್, ವಿಪುಲ ಡಿ. ಶೆಟ್ಟಿಗಾರ್, ಶಾರದಾ ಜಿ. ಬಂಗೇರ, ವಿಶ್ವನಾಥ್, ಯೋಗೀಶ್ ಆರ್. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿಯ ಅನಂತರಾಮ ಶಿಮಂತ್ರಾಯ, ಪಿ.ಸಿ.ಕೋಟ್ಯಾನ್, ಆರ್.ಎನ್.ಶೆಟ್ಟಿಗಾರ್, ಗಂಗಾಧರ ಶೆಟ್ಟಿ, ಗುರುರಾಜ್ ಎಸ್. ಪೂಜಾರಿ, ರತ್ನಾಕರ ಶೆಟ್ಟಿಗಾರ್, ಮಧವ ಶೆಟ್ಟಿ, ಪಿತಾಂಬರ ಶೆಟ್ಟಿಗಾರ್, ಸಂಪತ್ ದೇವಾಡಿಗ, ದೀಪಕ್ ಸುವರ್ಣ, ಧನಂಜಯ ಶೆಟ್ಟಿಗಾರ್, ರಮೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಸ್ವಾಗತಿಸಿದರು, ಪ್ರಧಾನ ಸಂಚಾಲಕ ಸೋಂದಾ ಭಾಸ್ಕರ ಭಟ್ ಪ್ರಸ್ತಾವನೆಗೈದರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ವಂದಿಸಿದರು, ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.