-->

ತೋಕೂರು: ಅಷ್ಟ ಬಂಧ ಬ್ರಹ್ಮ ಕುಂಭಾಭಿಷೇಕದ ಪೂರ್ವಭಾವಿಯಾಗಿ ನೂತನ ಧ್ವಜಸ್ತಂಭ  ಸ್ಥಾಪನೆ ಕಾರ್ಯಕ್ರಮ

ತೋಕೂರು: ಅಷ್ಟ ಬಂಧ ಬ್ರಹ್ಮ ಕುಂಭಾಭಿಷೇಕದ ಪೂರ್ವಭಾವಿಯಾಗಿ ನೂತನ ಧ್ವಜಸ್ತಂಭ ಸ್ಥಾಪನೆ ಕಾರ್ಯಕ್ರಮ

 
ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಭರದಿಂದ ಸಾಗುತ್ತಿದ್ದು, ಕ್ಷೇತ್ರದಲ್ಲಿ ಮೇ 10 ರಿಂದ 23ರ ವರೆಗೆ ನಡೆಯಲಿರುವ ಅಷ್ಟ ಬಂಧ ಬ್ರಹ್ಮ ಕುಂಭಾಭಿಷೇಕ ನಾಗಮಂಡಲೋತ್ಸವದ ಪ್ರಯುಕ್ತ ನೂತನ ಧ್ವಜಸ್ತಂಭ  ಸ್ಥಾಪನೆ ಕಾರ್ಯಕ್ರಮ ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಮಧುಸೂದನ ಆಚಾರ್ಯ ನೇತೃತ್ವದಲ್ಲಿ ಎ.28 ರ ಶುಕ್ರವಾರದಂದು  ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆದು ನೂತನ ದ್ವಜಸ್ತಂಭ ಸ್ಥಾಪನೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ದಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಮೋಹನ್ ದಾಸ್, ಗುರುರಾಜ್ ಎಸ್ ಪೂಜಾರಿ, ರತ್ನಾಕರ ಶೆಟ್ಟಿಗಾರ್,,ಸುಗಂಧಿ ಡಿ. ಕೊಂಡಾಣ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಬಿ. ದೇವಾಡಿಗ, ಕಾರ್ಯದರ್ಶಿ ಪುರುಷೋತ್ತಮ ಕೋಟ್ಯಾನ್, ರಮೇಶ್ ಅಮೀನ್,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್, ಸಮಿತಿ ಸದಸ್ಯರಾದ ವಿಜಯಕುಮಾರ್ ರೈ, ಲೋಕಯ್ಯ ಸಾಲ್ಯಾನ್, ಪುರುಷೋತ್ತಮ ರಾವ್, ವಿಪುಲ ಡಿ. ಶೆಟ್ಟಿಗಾರ್, ಶಾರದಾ ಜಿ. ಬಂಗೇರ , ರಾಮಚಂದ್ರ ನಾಯಕ್ ಕೋಲ್ನಾಡುಗುತ್ತು, ವಿನೋದ್ ಸಾಲ್ಯಾನ್ ಬೆಳ್ಳಾಯರು, ತೋಕೂರು ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮಾ ರಾವ್, ಹೇಮನಾಥ ಅಮೀನ್, ಲಕ್ಷ್ಮಣ್ ಸಾಲ್ಯಾನ್ ಧರ್ಮಾನಂದ ಶೆಟ್ಟಿಗಾರ್, ದಿನೇಶ್,ಎಸ್ ಕೆ ಪಿ ಎ ನ ಮೋಹನ್ ರಾವ್,
ದೇವಸ್ಥಾನದ ಸಿಬ್ಬಂದಿ ವರ್ಗ, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807