-->

 ತೋಕೂರು:ಕೊಡುಗೈದಾನಿಯಿಂದ ಸುಬ್ರಹ್ಮಣ್ಯ ದೇವರಿಗೆ  ಸ್ವರ್ಣ ಖಚಿತ ಶಕ್ತ್ಯಾಯುಧ ಸಮರ್ಪಣೆ

ತೋಕೂರು:ಕೊಡುಗೈದಾನಿಯಿಂದ ಸುಬ್ರಹ್ಮಣ್ಯ ದೇವರಿಗೆ ಸ್ವರ್ಣ ಖಚಿತ ಶಕ್ತ್ಯಾಯುಧ ಸಮರ್ಪಣೆ


ಕಿನ್ನಿಗೋಳಿ:ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ಪ್ರಧಾನ ದೇವರಾದ ಸುಬ್ರಾಯ ದೇವರಿಗೆ ಕೊಡುಗೈ ದಾನಿಗಳಾದ ಪ್ರಸ್ತುತ ಅಮೇರಿಕದಲ್ಲಿ ಉದ್ಯಮಿಯಾಗಿರುವ ಸತೀಶ್ ವಿ. ಅಂಚನ್ ಅವರು  ಸುಬ್ರಹ್ಮಣ್ಯ ದೇವರ ಆಯುಧವಾದ ಸ್ವರ್ಣ ಖಚಿತ ಶಕ್ತ್ಯಾಯುಧ (ವೇಲಾಯುಧ)ವನ್ನು ಅಪಾರ ಭಕ್ತ ಸಮೂಹದೊಂದಿಗೆ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭ ದೇವಸ್ಥಾನದ  ಪ್ರಧಾನ ಅರ್ಚಕ  ಮಧುಸೂದನ್  ಆಚಾರ್, ಅನಂತರಾಮ ಭಟ್ ತೋಕೂರು,  ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್, ಸಮಿತಿ ಸದಸ್ಯರಾದ ವಿಜಯಕುಮಾರ್ ರೈ, ಪುರುಷೋತ್ತಮರಾವ್ ,ಜೀರ್ಣೋದ್ಧಾರ  ಸಮಿತಿಯ ಉಪಾಧ್ಯಕ್ಷ ಮೋಹನ್ ದಾಸ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ಬಿ. ದೇವಾಡಿಗ, ಶೇಖರ್ ಪೂಜಾರಿ, ಸ್ವರ್ಣ ವೇಲಾಯುಧ ತಯಾರಕಾರದ ಶ್ರೀ ದುರ್ಗಾ ಜ್ಯುವೆಲ್ಲರ್ಸ್ ಮಾಲಕ ಬಿ. ಸೂರ್ಯಕುಮಾರ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807