ತರವಾಡು ಮನೆಯ ನವ ನಿರ್ಮಾಣಕ್ಕೆ ಶಿಲಾನ್ಯಾಸ
Saturday, May 13, 2023
ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ರಾಜಮನೆತನಗಳಲ್ಲಿ ಒಂದಾದ ಶಿಮಂತೂರು ಭಾವದ ತರವಾಡು ಮನೆಯ ನವ ನಿರ್ಮಾಣಕ್ಕೆ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ಹಾಗೂ ವಿಷ್ಣುಮೂರ್ತಿ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ನಡೆದು ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಶಿಲಾನ್ಯಾಸ ನೆರವೇರಿಸಿದರು
ಈ ಸಂದರ್ಭ ಅವರು ಮಾತನಾಡಿ ತುಳುನಾಡಿನ ಇತಿಹಾಸದ ಅನೇಕ ರಾಜ ಮನೆತನಗಳಲ್ಲಿ ಶಿಮಂತೂರು ಬಾವ ಕೂಡ ಸೇರಿದ್ದು ಕ್ರಿ.ಶ 1,378 ರಿಂದ 1750 ತನಕ ಮುಲ್ಕಿ ಸೀಮೆಯನ್ನು ಆಳಿದ ಸಾವಂತರು ಒಂಬತ್ತು ಮಾಗಣೆಯ ರಾಜರಾಗಿದ್ದು ಅವರ ರಾಜಧಾನಿ ಶಿಮಂತೂರು ಆಗಿದ್ದು ಶಿಮಂತೂರು ಬಾವ ಅವರ ಅರಮನೆಯಾಗಿತ್ತು ಎಂದು ಹೇಳಿ ಪುರಾತನ ಕಾಲದ ಸೀಮೆಯ ತರವಾಡು ಮನೆಯನ್ನು ಜೀರ್ಣೋದ್ಧಾರದ ಮೂಲಕ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದರು
ಈ ಸಂದರ್ಭ ಶಿಮಂತೂರು ಬಾಬಾ ಟ್ರಸ್ಟ್ ನ ಅಧ್ಯಕ್ಷರಾದ ಉದಯ ಬಿ ಶೆಟ್ಟಿ, ಗೌರವಾಧ್ಯಕ್ಷ ಕರುಣಾಕರ ಬಿ ಶೆಟ್ಟಿ, ಉಪಾಧ್ಯಕ್ಷ ಹೇಮನಾಥ ಶೆಟ್ಟಿ, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು,ಚಂದ್ರಹಾಸ ಸುವರ್ಣ,
ಸದಸ್ಯರಾದ ಸುರೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ ರವೀಂದ್ರ ಶೆಟ್ಟಿ ,ಗಣೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಹೇಮನಾಥ ಶೆಟ್ಟಿ, ದಿನೇಶ್ ಶೆಟ್ಟಿ ,ಪ್ರಕಾಶ್ ಶೆಟ್ಟಿ, ವಿಜಯಾನಂದ ರೈ, ಶಂಕರ್ ಮಾಸ್ಟರ್, ಲೀಲೇಶ್ ಶೆಟ್ಟಿ, ಜಯರಾಮ್ ಹೆಗ್ದೆ, ಬಾಲಕೃಷ್ಣ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ ವಿಠಲಶೆಟ್ಟಿ, ಉಮೇಶ್ ಭಾಸ್ಕರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.