-->

ಕೊಲ್ನಾಡಿನಲ್ಲಿ "ನವ ಕರ್ನಾಟಕ ಸಂಕಲ್ಪ ಸಮಾವೇಶ

ಕೊಲ್ನಾಡಿನಲ್ಲಿ "ನವ ಕರ್ನಾಟಕ ಸಂಕಲ್ಪ ಸಮಾವೇಶ

ಮೂಲ್ಕಿ:ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದೀಜಿಯವರ ಉಪಸ್ಥಿತಿಯಲ್ಲಿ ಮೂಲ್ಕಿಯ ಕೊಲ್ನಾಡಿನಲ್ಲಿ "ನವ ಕರ್ನಾಟಕ ಸಂಕಲ್ಪ ಸಮಾವೇಶ" ದಲ್ಲಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿ ಹೆಮ್ಮೆಯ ಪ್ರಧಾನಿ ಮೋದೀಜಿಯವರಿಗೆ ಕಟೀಲು ಶ್ರೀ ದೇವಿಯ ಸೀರೆ ಮತ್ತು ಕಟೀಲು, ಬಪ್ಪನಾಡು ಹಾಗೂ ಮೂಲ್ಕಿ ವೆಂಕಟರಮಣ ದೇವಸ್ಥಾನದ ಪ್ರಸಾದ ಹಾಗೂ ಕ್ಷೇತ್ರದ ಕಾರ್ಯಕರ್ತರೊಬ್ಬರು ರಚಿಸಿದ ಬೆಳ್ಳಿಯ ಭಾವಚಿತ್ರವನ್ನು  ಉಡುಗೊರೆಯಾಗಿ ನೀಡಿದರು
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್,ಕೇಂದ್ರ ಕೃಷಿ  ಮತ್ತು ರೈತ ಕಲ್ಯಾಣ ಇಲಾಖೆ ಸಚಿವೆ ಕು. ಶೋಭಾ ಕರಂದ್ಲಾಜೆ, ಸಚಿವರು ಹಾಗೂ ಕಾರ್ಕಳ ಕ್ಷೇತ್ರದ ಅಭ್ಯರ್ಥಿ  ಸುನಿಲ್ ಕುಮಾರ್ ಕಾರ್ಕಳ,ಬಿಜೆಪಿ ಅಭ್ಯರ್ಥಿಗಳಾದ ರಾಜೇಶ್ ನಾಯಕ್, ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಆಶಾ ತಿಮ್ಮಪ್ಪ ಗೌಡ, ವೇದವ್ಯಾಸ್ ಕಾಮತ್, ಭಾಗಿರತಿ ಮುರುಳ್ಯ, ಸತೀಶ್ ಕುಂಪಲ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,ಕಿರಣ್ ಕುಮಾರ್ ಕೊಡ್ಗಿ,ಗುರುರಾಜ್ ಗಂಟಿಹೊಳೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ  ಸುದರ್ಶನ್ ಮೂಡುಬಿದಿರೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ  ಕುಯಿಲಾಡಿ ಸುರೇಶ್ ನಾಯಕ್,ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807