ಕಟೀಲು:ಮಳೆಗಾಗಿ ಕಟೀಲಮ್ಮನಲ್ಲಿ ಪ್ರಾರ್ಥನೆ
Saturday, May 6, 2023
ಕಳೆದ ಕೆಲವು ದಿನಗಳಿಂದ ಮಳೆ ಇಲ್ಲದೆ ನೀರಿಗಾಗಿ ಪರಿತಪಿಸುವ ಸಂಕಷ್ಟದಲ್ಲಿ ನಾವಿದ್ದೇವೆ. ಈ ಸಂಕಷ್ಟದಿಂದ ಪಾರು ಮಾಡಲು ವರುಣನ ಕೃಪೆಗಾಗಿ ನಾವು ತಾಯಿ ಕಟೀಲಮ್ಮನಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಮತ್ತು ಭಕ್ತಾಧಿಗಳು ಕಟೀಲು ದೇವಳದಲ್ಲಿ ಉಪಸ್ಥಿತರಿದ್ದು, ದೇವರಲ್ಲಿ ಕೈ ಜೋಡಿಸಿ ಪ್ರಾರ್ಥಿಸುವುದೆಂದು ತೀರ್ಮಾನಿಸಲಾಗಿದೆ. ಆದುದರಿಂದ ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಲು ವಿನಂತಿಸುತ್ತೇವೆ ಎಂದು
ಅತ್ತೂರು ಕೊಡೆತ್ತೂರು ಮಾಗಣೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.