Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ನ ಸಹಯೋಗದೊಂದಿಗೆ “ಬಳಕೆದಾರರ ಕಾನೂನು ಮಾಹಿತಿ ಶಿಬಿರ”

ಹಳೆಯಂಗಡಿ:ಭಾರತದ  ಕಾನೂನು ನೆರವು ಕೇಂದ್ರ ಹಳೆಯಂಗಡಿ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ನ ಸಹಯೋಗದೊಂದಿಗೆ ಹಳೆಯಂಗಡಿಯ  ಯೋಗ ಮಂದಿರದಲ್ಲಿ  ಗ್ರಾಹಕರ ದಿನಾಚರಣೆಯ ಪ್ರಯುಕ್ತ “ಬಳಕೆದಾರರ ಕಾನೂನು ಮಾಹಿತಿ ಶಿಬಿರ” ವು ನಡೆಯಿತು.ಶಿಬಿರವನ್ನು  ನ್ಯಾಯಾಂಗ ಇಲಾಖೆ ಹಿರಿಯ ಶಿರಸ್ತೆದಾರ  ಪ್ರಕಾಶ್ ನಾಯಕ್ ಅವರು  ಉದ್ಘಾಟಿಸಿ ”ಗ್ರಾಹಕರ ಸಂರಕ್ಷಣಾ ಕಾನೂನು, ಗ್ರಾಹಕರ ವಿವಾದ , ಪರಿಹಾರ, ಸಬಲೀಕರಣ ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕಾಯಿದೆ ಶ್ರಮಿಸುತ್ತದೆ” ಎಂದು ಹೇಳಿದರು. 
ನೋಟರಿ ವಕೀಲರಾದ  ಡೇನಿಯಲ್ ದೇವರಾಜ್ ಅವರು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ   “ಬಳಕೆದಾರರ ಸಂರಕ್ಷಣಾ ಕಾಯಿದೆ ಗ್ರಾಹಕರು ತಮ್ಮ ದೂರನ್ನು ಸಲ್ಲಿಸಲು ವೇದಿಕೆಯನ್ನು ಒದಗಿಸುತ್ತದೆ. ವೇದಿಕೆಯ ಸಂಬಂಧಪಟ್ಟ  ಪೂರೈಕೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದು  ಮಾತ್ರವಲ್ಲದೆ ಗ್ರಾಹಕರು ಎದುರಿಸುವ  ತೊಂದರೆಗೆ ಪರಿಹಾರ ನೀಡಲಾಗುತ್ತದೆ” ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್ ಜಯಪ್ರಸಾದ್, ರೆವೆ ಎಡ್ವರ್ಡ್ ಎಸ್ ಕರ್ಕಡ ತೊಕೊಟ್ಟು, ರೆವೆ ವಿನಯಲಾಲ್ ಬಂಗೇರಾ ಬೊಲ್ಮ, ರೆವೆ ಐಸನ್ ಪಾಲನ್ನ, ರೆವೆ ವಿಲಿಯಂ ಕುಂದರ್, ರೆವೆ. ದೀಪಕ್ ಶಾಂತರಾಜ್ ಬೊಕ್ಕಪಟ್ಟಣ, ರೆವೆ. ಅಮೃತ್‌ರಾಜ್ ಕೋಡೆ ಹಳೆಯಂಗಡಿ, ಸಿ.ಎಸ್.ಐ ಹಳೆಯಂಗಡಿ ಚರ್ಚಿನ  ರಾಹುಲ್ ಕರ್ಕಡ, ಜೋಸ್ಲಿನ್ ಬಂಗೇರಾ, ಡೆರಿನ್ ನಿಶಾಲ್, ಸುಷ್ಮಾ ಕರ್ಕಡ, ರೆನಿಟಾ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಹೈಕೋರ್ಟ್ ವಕೀಲ ಮಹಮ್ಮದ್ ಅನ್ವಾರ್, ಬಳಕೆದಾರ ಹಿತರಕ್ಷಣಾ ಕಾಯಿದೆ ಹಾಗೂ ವಕೀಲ  ಸಂದೇಶ್ ಭಟ್  ರವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.
 ಕಾರ್ನಾಡ್ ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲಾ  ಪ್ರಾಂಶುಪಾಲೆ ಶಾಂತಿ ಸುಹಾಸಿನಿ ಸ್ವಾಗತಿಸಿದರು. ಎಸ್.ಡಿ.ಎಮ್ ಕಾಲೇಜು ವಿದ್ಯಾರ್ಥಿ ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಸನ್ನಿ  ಧನ್ಯವಾದವಿತ್ತರು. ಸಮರ್ಪಿಸಿದರು.