ನ 14, 15, 16ರಂದು ಈಗಲ್ ಮರೈನ್ ವತಿಯಿಂದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ-ಮಿಥುನ್ ರೈ ಟ್ರೋಪಿ 2025
Wednesday, November 12, 2025
ಮೂಲ್ಕಿ : ಮೂಲ್ಕಿಯ ಈಗಲ್ ಮರೈನ್ ಸಂಯೋಜನೆಯಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಮಿಥುನ್ ರೈ ಟ್ರೋಪಿ 2025 ಪಂದ್ಯಾಟ ನ. 14,15,16ರಂದು ಮೂಲ್ಕಿ ವಿಜಯ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿ ಆದಿಧನ್ ಹೋಟೆಲ್ ಸಭಾಂಗಣದಲ್ಲಿ
ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ, ನ. 14ರಂದು ಬೆಳಿಗ್ಗೆ ವಿಜಯ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಭಟ್ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
15ರಂದು ಮಿಥುನ್.ಎಂ.ರೈ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸುವರು.ಅಭಯಚಂದ್ರ ಜೈನ್, ಬಿ. ರಮಾನಾಥ್ ರೈ,
ಮಂಜುನಾಥ ಭಂಡಾರಿ, ಐವನ್ ಡಿ. ಸೋಜಾ, ಅಶೋಕ್ ಕುಮಾರ್ ರೈ, ಕೆ. ಹರೀಶ್ ಕುಮಾರ್, ಪದ್ಮರಾಜ್ ಆರ್.ಪೂಜಾರಿ, ಇನಾಯತ್ ಅಲಿ, ರಕ್ಷಿತ್ ಶಿವರಾಮ್ ಮತ್ತಿತರರು ಪಾಲ್ಗೊಳ್ಳುವರು
16 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಯು. ಟಿ. ಖಾದರ್, ವಿನಯ್ ಕುಮಾರ್ ಸೊರಕೆ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಸೂರ್ಯಕಾಂತ ಜಯ ಸುವರ್ಣ, ಐಕಳ ಹರೀಶ್ ಶೆಟ್ಟಿ, ವಸಂತ ಬೆರ್ನಡ್ ಮತ್ತಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಸಂಘಟಕ ರಕ್ಷಿತ್ ಪೂಜಾರಿ ಕೊಳಚಿಕಂಬಳ ಮಾತನಾಡಿ, ಮೂಲ್ಕಿಯ ಇತಿಹಾಸದಲ್ಲಿ ರಾಷ್ಟ್ರೀಯ ಮಟ್ಟದ ನಡೆಯುವ ಪಂದ್ಯಾಟದಲ್ಲಿ ಸುಮಾರು 17 ತಂಡಗಳು ಭಾಗವಹಿಸಲಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಗುಜರಾತ್ ಬೆಂಗಳೂರು ತಂಡ ಭಾಗವಹಿಸಲಿದೆ. ವಿಜೇತರಿಗೆ ಮೂರು ಲಕ್ಷ ಹಾಗೂ ಚಿನ್ನದ ಪದಕ, ರನ್ನರ್ಸ ಗೆ ಒಂದೂವರೆ ಲಕ್ಷ, ಸರಣಿ ಶ್ರೇಷ್ಠ ಹತ್ತು ಸಾವಿರ, ಪ್ರತೀ ಪಂದ್ಯಾಟದ ವಿಜೇತರಿಗೆ ಹಾಗೂ ವಯಕ್ತಿಕ ಐದು ಸಾವಿರ ನಗದು ಬಹುಮಾನ ಇದೆ ಎಂದರು.
ಅಶೋಕ್ ಪೂಜಾರ, ಮಂಜುನಾಥ ಕಂಬಾರ್ ಉಪಸ್ಥಿತರಿದ್ದರು.