ದೇವಾಡಿಗ ಸಮಾಜ ಸೇವಾ ಸಂಘ,ವಧು ವರರ ನೋಂದಣಿ ಮತ್ತು ಅನ್ವೇಷಣೆ ಕಾರ್ಯಕ್ರಮ
Wednesday, October 29, 2025
ಪಾವಂಜೆ : ದೇವಾಡಿಗ ಸಮಾಜ ಸೇವಾ ಸಂಘ (ರಿ) ಪಾವಂಜೆ, ಮಹಿಳಾ ವೇದಿಕೆ, ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ದೇವಾಡಿಗ ವಧು ವರರ ವೇದಿಕೆ ಇದರ ಸಹಯೋಗದಲ್ಲಿ ಸಂಘದ ಸಭಾ ಭವನದಲ್ಲಿ ವಧು ವರರ ನೋಂದಣಿ ಮತ್ತು ಅನ್ವೇಷಣೆ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆ ಮೂಲಕ ಸಂಘದ ಹಿರಿಯ ದಂಪತಿಗಳು ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ರಮಾ ದೇವಿ ಹಾಗೂ ಪರಮೇಶ್ವರ್ ಪಿ. ಅವರು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವಾಡಿಗ ಸಂಘ(ರಿ) ಮುಂಬೈ ಅಧ್ಯಕ್ಷ ರವಿ ಎಸ್ ದೇವಾಡಿಗ ,ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ) ಮಂಗಳೂರು ಅಧ್ಯಕ್ಷ ಆಶೋಕ್ ಎ ದೇವಾಡಿಗ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಯಾದವ ದೇವಾಡಿಗ, ಮಹಿಳಾ ವೇದಿಕೆ ಅಧ್ಯಕ್ಷ ವಿಜಯಲಕ್ಷ್ಮಿ ಜನಾರ್ದನ, ಟ್ರಸ್ಟ್ ಅಧ್ಯಕ್ಷ ರಮೇಶ್ ಕುಮಾರ್ ತೋಕೂರು, ಯುವ ವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ, ದೇವಾಡಿಗ ವಧು ವರರ ವೇದಿಕೆಯ ಸದಸ್ಯರಾದ ಜೀವನ್ ಪ್ರಕಾಶ್, ಅಶೋಕ್ ಪಾವಂಜೆ, ಶೋಭಾ ಸೋಮನಾಥ್, ಶೈಲಜಾ ವಾಮನ್, ವೈಶಾಲಿ ಆನಂದ್ ಉಪಸ್ಥಿತರಿದ್ದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಸುರೇಂದ್ರರವರು ಪ್ರಾರ್ಥಸಿದರು. ಕಾರ್ಯಕ್ರಮದಲ್ಲಿ ಸುಮಾರು 125 ಹುಡುಗರು,ಹುಡುಗಿಯರು ಹಾಗೂ ಹೆತ್ತವರು ಭಾಗವಹಿಸಿದ್ದರು. ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಮದಾಸ ಪಾವಂಜೆ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಧನ್ಯವಾದ ವಿತ್ತರು.