ಮಿಥುನ್ ರೈ ಅವರ ಸಮಾಜ ಸ್ಪಂದನೆಯೇ ಸ್ಪೂರ್ತಿ : ಅಶೋಕ್ ಪೂಜಾರ್
Saturday, October 4, 2025
ಮೂಲ್ಕಿ: ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸದಾ ಬೆರೆತು ಸಾಮಾಜಿಕ ಸ್ಪಂದನೆ ನೀಡುವ ಯುವನೇತಾರ ಮಿಥುನ್ ರೈ ಅವರೇ ನಮಗೆ ಸ್ಪೂರ್ತಿಯಾಗಿದ್ದು ಅವರ ಹುಟ್ಟು ಹಬ್ಬದ ದಿನದಂದು ಸಮಾಜದ ಚಿಂತನೆ ಮಾಡುವ ಅವಕಾಶ ನಮಗೆಲ್ಲರಿಗೂ ಸಿಕ್ಕಿದೆ ಎಂದು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು. ಅವರು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲನ್ನು ವಿತರಿಸಿ ಮಾತನಾಡಿದರು.
ಆಸ್ಪತ್ರೆಯ ಡಾ. ಜತ್ತನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ರಕ್ಷಿತ್ ಪೂಜಾರಿ ಕೊಳಚಿಕಂಬಳ, ಕಿರಣ್ ಶೆಟ್ಟಿ ಕೆರೆಮನೆ, ದೀಕ್ಷಿತ್ ಪೂಜಾರಿ ಮತ್ತಿತರರು ಇದ್ದರು.