ಮೂಲ್ಕಿ ಹೋಬಳಿ ಕ್ರೀಡಾಕೂಟದಲ್ಲಿ ಎಕ್ಕಾರು ಸರ್ಕಾರಿ ಶಾಲೆಗೆ ಪ್ರಶಸ್ತಿ
Tuesday, October 28, 2025
ಬಜಪೆ:ಮೂಲ್ಕಿಯ ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮೂಲ್ಕಿ ಹೋಬಳಿ ಮಟ್ಟದ ಅಂಡರ್ 17 ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಎಕ್ಕಾರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡರು.
ಅಂಡರ್ 17 ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಸೃಷ್ಟಿ ಶೆಟ್ಟಿ, ಕೃತಿಕಾ, ಭೂಮಿಕಾ ಹೆಗ್ಡೆ, ಜಾಹ್ನವಿ, ಸೃಜನ್ ಶೆಟ್ಟಿ,
ವಿನೀತ್ ಸುವರ್ಣ, ನಂದೀಶ್ ವಾಲಿಕರ್ ವಯಕ್ತಿಕ ಬಹುಮಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ರಿಲೆ ಒಟದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ವಿದ್ಯಾ ಲತಾ ತರಬೇತಿಯನ್ನು ನೀಡಿದ್ದು, ಡಾ. ಅನಿತ್ ಕುಮಾರ್ ತಂಡದ ಮುಖ್ಯಸ್ಥರಾಗಿದ್ದರು.