-->
ರೋಟರಿ ಕ್ಲಬ್ ಮಣಿಪಾಲ ಹಿಲ್ಸ್  ನ ವತಿಯಿಂದ  ಮುದ್ದು ಕೃಷ್ಣ ಸ್ಪರ್ಧೆ

ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ:ರೋಟರಿ ಕ್ಲಬ್ ಮಣಿಪಾಲ ಹಿಲ್ಸ್  ನ ವತಿಯಿಂದ  ಸೆ. 8  ರಂದು ರೋಟರಿ ಸಭಾಂಗಣ ಮಣ್ಣಪಳ್ಳ ದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಕ್ಲಬ್ ಗೆ ಸೇರಿರುವ 6 ಸಮುದಾಯ ದಳಗಳಾದ ಆದರ್ಶ ನಗರ, ಪ್ರಗತಿ ನಗರ, ಬ್ರಾಮರಿ, ನೇತಾಜಿ ನಗರ, ಮಂಚಿಕೋಡಿ, ಧೂಮವತಿ ಸಮುದಾಯದಳದ ಸದಸ್ಯರ 1 ರಿಂದ 6 ವರ್ಷದ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಸಮುದಾಯದಳಕ್ಕೆ ಸೇರಿದ್ದ 6 ಅಂಗನವಾಡಿ ಶಿಕ್ಷಕಿಯರು  ಮತ್ತು ರೋಟರಿ ಕ್ಲಬ್ ನ ಇಬ್ಬರು ಶಿಕ್ಷಕರನ್ನು  ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
 ಕಾರ್ಯಕ್ರಮವನ್ನು ರೋ. ವಲಯ ಸೇನಾನಿ ಜನಾರ್ಧನ್ ಭಟ್  ಉದ್ಘಾಟಿಸಿದರು. 
ಶ್ರೀಮತಿ ಜ್ಯೋತಿ ಸರ್ವೋದೆಯವರು ಬಹುಮಾನ ವಿತರಿಸಿದರು. 

 ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ಅಧ್ಯಕ್ಷ ರೋ. ಸುರೇಶ ರೈ  ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ರೋ. ಶ್ರೀಲತಾ ಮೈಯ ನಿರೂಪಿಸಿದರು. ಪ್ರಾರ್ಥನೆಯನ್ನು ರೋ. ಗೀತಾ ಸುರೇಶ ರೈ, ರೋ. ಶ್ರೀಲತಾ ಮೈಯ ಹಾಗೂ ರೋ. ಜಾಹ್ನವಿ ಬಂಗೇರ ನಡೆಸಿಕೊಟ್ಟರು.
ಈ  ಸಂದರ್ಭ ಸಮುದಾಯದಳದ ಸದಸ್ಯರಿಂದ  ನೃತ್ಯ ಪ್ರದರ್ಶನ ನಡೆಯಿತು.

  ರೋ. ಮಾಲತಿ ರಾವ್, ರೋ. ವಂದನಾ ರಾವ್, ರೋ. ಮಾಧವ ಮೈಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ