ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ - ಹೇಮನಾಥ ಅಮೀನ್
Monday, September 22, 2025
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ಮೇರಾ ಯುವ ಭಾರತ್, ಮೈ ಭಾರತ್ ದ. ಕ ಜಿಲ್ಲೆ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು,
ಗ್ರಾಮ ಪಂಚಾಯತ್ ಪಡುಪಣಂಬೂರು,
ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ, ದ. ಕ ಜಿಲ್ಲೆ, ಹಾಗೂ ಗ್ರಾಮೀಣ ಮಟ್ಟದ ಕ್ರಿಕೆಟ್ ಅಸೋಸಿಯೇಷನ್, ಇವರುಗಳ ಮಾರ್ಗದರ್ಶನದಲ್ಲಿಜಿಲ್ಲಾ, ರಾಜ್ಯ, ಹಾಗೂ ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ,ಇದರ ಆಶ್ರಯದಲ್ಲಿ ,
ತೋಕೂರು ದಿ!ಬೂಬ ದೇವಾಡಿಗರ ಸ್ಮರಣಾರ್ಥ 35 ನೇ ವರ್ಷದ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟವು ತೋಕೂರು ಹಿಂದೂಸ್ಥಾನಿ ಶಾಲಾ ಮೈದಾನದಲ್ಲಿ ಆದಿತ್ಯವಾರ ನಡೆಯಿತು.
ಕ್ರೀಡೆ ಎಂಬುದು ಸಂಘಟಿತ ,ಸ್ಪರ್ಧಾತ್ಮಕ ಮತ್ತು ಕುಶಲದಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಹೇಮನಾಥ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ದೇವಾಡಿಗ ಪಂಜ, ಹಳೆಯಂಗಡಿ ಲಯನ್ಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಲ. ಶರತ್, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್, ತೋಕೂರಿನ ಸಿವಿಲ್ ಕಂಟ್ರಾಕ್ಟರ್ ಸಂತೋಷ್ ಎನ್. ದೇವಾಡಿಗ,ಕ್ಲಬ್ ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಅಧ್ಯಕ್ಷ ಸುರೇಶ್ ಶೆಟ್ಟಿ ,ಕ್ಲಬ್ ನ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಗ್ರಾಮೀಣ ಕ್ರಿಕೆಟ್ ಟೂರ್ನಿಯ ಪಂದ್ಯಾಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದವು.
ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು.
ಕೋಶಾಧಿಕಾರಿ ಜಗದೀಶ್ ಕುಲಾಲ್ ವಂದಿಸಿದರು.
ಸುರೇಶ್ ಲೈಟ್ ಹೌಸ್ ಮತ್ತು ಪ್ರವೀಣ್ ಪಾವಂಜೆ ಸಹಕರಿಸಿದರು.ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.