ಮುಲ್ಕಿ:ಶಾಫಿ ಜುಮ್ಮಾ ಮಸ್ಜಿದ್ ಜಮಾತ್ ನ ನವೀಕೃತ ದರ್ಗಾ ಉದ್ಘಾಟನೆ ಮತ್ತು ಈದ್ ಮಿಲಾದ್ ಸಮಾರೋಪ ಸಮಾರಂಭ
Friday, September 5, 2025
ಮುಲ್ಕಿ:ಶಾಫಿ ಜುಮ್ಮಾ ಮಸ್ಜಿದ್ ಜಮಾತ್ ನ ನವೀಕೃತ ದರ್ಗಾ ಉದ್ಘಾಟನೆ ಮತ್ತು ಈದ್ ಮಿಲಾದ್ ಸಮಾರೋಪ ಸಮಾರಂಭ ಮುಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿ ಆವರಣದಲ್ಲಿ ಗುರುವಾರ ಸಂಜೆ ನಡೆಯಿತು
ನೂತನ ನವೀಕೃತ ದರ್ಗಾ ವನ್ನು ಕುಂಬೋಲ್ ತಂಙಳ್ ಸಯ್ಯಿದ್ ಆಲಿ ಉದ್ಘಾಟಿಸಿ ಮಾತನಾಡಿ ಯುವ ಜನಾಂಗ ಶಾಂತಿ, ಸೌಹಾರ್ದತೆ ಭಾವೈಕ್ಯತೆ ಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಿ ಎಂದರು.
ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ಹಾಜಿ ಉಸ್ಮಾನುಲ್ ಫೈಝಿ ತೊಡಾರು ದುವಾ ನೆರವೇರಿಸಿದರು
ಈದ್ ಮಿಲಾದ್ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಪಯ್ಯನೂರು ಎಝ್ಮುಲ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಅಲ್ ಬುಖಾರಿ ನೆರವೇರಿಸಿದರು
ಎಂ ಜೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವ,
ಮಸೀದಿಯ ಕೋಶಾಧಿಕಾರಿ ಇಕ್ಬಾಲ್ ಅಹಮದ್ , ಕಾರ್ನಾಡ್ ಮಸೀದಿಯ ಖತೀಬರಾದ ರಿಯಾಝ್ ಫೈಝಿ , ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ,ಜಿಲ್ಲಾ ವಕ್ಫ್ ಅಧಿಕಾರಿ, ಎಂ ಅಬೂಬಕ್ಕರ್, ಮಸೀದಿ ಪ್ರಧಾನ ಕಾರ್ಯದರ್ಶಿ ಮೊಹಮದ್ ಫಾರೂಕ್, ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ರಿಯಾಝ್, ನುಸ್ರುತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ,ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ಪಾಝ್, ಮಸೀದಿ ಜೊತೆ ಕಾರ್ಯದರ್ಶಿ ಕೆ. ಎ ಇಬ್ರಾಹಿಂ ಉಪಸ್ಥಿತರಿದ್ದರು. ತಯ್ಯೂಬ್ ಫೈಝಿ ನಿರೂಪಿಸಿದರು.