ಅಂತಾರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಐದು ಬಂಗಾರದ ಪದಕ, ಕಟೀಲಿನ ಕೀರ್ತನ್ ಕುಂದರ್ ಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ
Monday, September 8, 2025
ಕಟೀಲು:ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಐದು ಬಂಗಾರದ ಪದಕಗಳನ್ನು ಪಡೆದು ಹುಟ್ಟೂರಿಗೆ ಆಗಮಿಸಿದ ಕಟೀಲಿನ ಕೀರ್ತನ್ ಕುಂದರ್ ಅವರನ್ನು ಸ್ವಾಗತಿಸಲಾಯಿತು. ಕಟೀಲು ದೇಗುಲದ ಆರ್ಚಕ ವೆಂಕಟರಮಣ ಆಸ್ರಣ್ಣ ಶ್ರೀಸಾಯಿ ಗುರೂಜಿ, ಕೀರ್ತನ್ ಅವರ ಗುರು ವಿಜಯ ಕಾಂಚನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಗಿರೀಶ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ದೊಡ್ಡಯ್ಯ ಮೂಲ್ಯ, ತಿಮ್ಮಪ್ಪ ಕೋಟ್ಯಾನ್, ಕೀರ್ತನ್ ತಂದೆ ಚಂದ್ರಹಾಸ ಕುಂದರ್, ತಾಯಿ ನಿರ್ಮಲಾ, ಪ್ರೇಮ್ ರಾಜ್ ಶೆಟ್ಟಿ, ನೀಲಯ್ಯ ಕೋಟ್ಯಾನ್, ಶೈಲೇಶ ಅಂಚನ್, ರಮಾನಂದ ಪೂಜಾರಿ, ಸೀತಾರಾಮ ಶೆಟ್ಟಿ ಮತ್ತಿತರರಿದ್ದರು.