-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ದೈಹಿಕ ಸದೃಡತೆಗೆ ಕ್ರೀಡೆ ಸಹಕಾರಿ - ವೇದಾವತಿ

ದೈಹಿಕ ಸದೃಡತೆಗೆ ಕ್ರೀಡೆ ಸಹಕಾರಿ - ವೇದಾವತಿ

ಬಜಪೆ :ದೈಹಿಕ  ಸದೃಡತೆ ಮತ್ತು ಪರಿಶ್ರಮದ ಮನೋಭಾವ ವನ್ನು ಅಭಿವೃದ್ದಿ ಪಡಿಸಲು ಕ್ರೀಡೆಯು ಸಹಕಾರಿಎಂದು ತಾಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ವೇದಾವತಿ ಹೇಳಿದರು.ಅವರು ದ.ಕ ಜಿ.ಪಂ ,ಶಾಲಾ ಶಿಕ್ಷಣಾ ಮತ್ತು ಸಾಕ್ಷರತಾ ಇಲಾಖೆ  ಕೇತ್ರ ಶಿಕ್ಷಣಾಧಿಕಾರಿಗಳ  ಕಚೇರಿ ಮಂಗಳೂರು ಉತ್ತರ ವಲಯ  ಹಾಗೂ ದ.ಕ.ಜಿ.ಪಂ.ಸರಕಾರಿ ಫ್ರೌಢಶಾಲೆ ಬಡಗ ಎಕ್ಕಾರು ಇವರ ಸಹಯೋಗದಲ್ಲಿ ಎಕ್ಕಾರು ಬಂಟರ ಭವನದ ಮೈದಾನದಲ್ಲಿ   ಮಂಗಳೂರು ಉತ್ತರ ತಾಲೂಕು ಮಟ್ಟದ  17 ರ ವಯೋಮಾನ  ಹಾಗೂ 14 ರ ವಯೋಮಾನದ ಒಳಗಿನ ಬಾಲಕ ಬಾಲಕಿಯರ  ಖೋ  ಖೋ ಪಂದ್ಯಾಟ 2025 -26  ರಲ್ಲಿ ಭಾಗವಹಿಸಿ ಮಾತನಾಡಿದರು.
ಖೋ ಖೋ ಪಂದ್ಯಾಟವನ್ನು ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ ಉದ್ಘಾಟಿಸಿದರು.
ಈ ವೇಳೆ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು,ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್,ಡಾ.ಶಿವಾನಂದ ಪ್ರಭು ಮಾತನಾಡಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅರ್ .ಅಮೀನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಕ್ಕಾರು ಗ್ರಾಮದ ಪ್ರಮುಖ ನಾಲ್ಕು ಕರೆಗಳಾದ ತಾಂಗಾಡಿ,ಬಡಕರೆ,ನಡ್ಯೋಡಿ ಹಾಗೂ ಕೋಂಬೋಡಿ ಎಂಬ ಹೆಸರುಗಳನ್ನು ಖೋ ಖೋ ಕೋರ್ಟ್ ಗಳಿಗೆ ಇಡಲಾಗಿತ್ತು.

ಈ ಸಂದರ್ಭ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್ .ಜಿ,ಜಿ.ಪಂ ಮಾಜಿ ಸದಸ್ಯ ಈಶ್ವರ್ ಕಟೀಲ್ ,ದೈಹಿಕ ಶಿಕ್ಷಕರ  ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್,ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್ ಪುತ್ರನ್ ,ಕಾರ್ಯದರ್ಶಿ ಸಂತೋಷ್,ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಚೆಲುವಮ್ಮ,ವಿಜಯ ಯುವ ಸಂಗಮದ ಅಧ್ಯಕ್ಷ ಪ್ರವೀಣ್,ಕಾಯ್ಡಂಡ ಯುವಕ ಮಂಡಲದ ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ ,ರತನ್ ಶೆಟ್ಟಿ,ಸ್ಟ್ಯಾನೀ ಮಿರಾಂದ,ಡಿಸಿಸಿ ಕ್ಲಬ್ ನ ಅಧ್ಯಕ್ಷ ಸುಮನ್,ಎಕ್ಕಾರು ಗ್ರಾ.ಪಂ ನ ಸದಸ್ಯರುಗಳಾದ ವಿಕ್ರಂ ಮಾಡ,ಅನಿಲ್ ,ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ .ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ವಿದ್ಯಾಗೌರಿ ಸ್ವಾಗತಿಸಿ,ಶಿಕ್ಷಕಿ ಚಿತ್ರಾಶ್ರೀ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತ ಧನ್ಯವಾದವಿತ್ತರು.



ಫಲಿತಾಂಶ:

14 ರ ವಯೋಮಾನದ ಒಳಗಿನ ಬಾಲಕರ ಖೋ ಖೋ ಪಂದ್ಯಾಟದಲ್ಲಿ ಪ್ರಥಮ  ಇನ್ ಫಾಂಟ್ ಮೇರಿ ಕಾಟಿಪಳ್ಳ,ದ್ವಿತೀಯ ಸೈಂಟ್ ಜೊಸೇಫ್ ಬಜ್ಪೆ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಇನ್ ಫಾಂಟ್ ಮೇರಿ ಕಾಟಿಪಳ್ಳ,ದ್ವಿತೀಯ ಪಿ.ಎಂ.ಶ್ರೀ ಮಾದರಿ ಹಿ.ಪ್ರಾ ಶಾಲೆ ಸದಾಶಿವ ನಗರ ಪ್ರಶಸ್ತಿಯನ್ನುಪಡೆದುಕೊಂಡಿದೆ.17 ರ ವಯೋಮಾನದ ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಪ್ರಥಮ  ಇನ್ ಫಾಂಟ್ ಮೇರಿ ಕಾಟಿಪಳ್ಳ,ದ್ವಿತೀಯ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು,ಬಾಲಕರ ವಿಭಾಗದಲ್ಲಿ ಪ್ರಥಮ ಇನ್ ಫಾಂಟ್ ಮೇರಿ ಕಾಟಿಪಳ್ಳ,ದ್ವಿತೀಯ ಸೈಂಟ್ ಅ್ಯನ್ಸ್  ಕುಂಟಿಕಾನ ವು ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಚೇಸರ್ ಆಗಿ  ಹೊರಹೊಮ್ಮಿದ ಕ್ರೀಡಾಪಡುಗಳಾಗಿ   ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನ ಜಾಹ್ನವಿ ಹಾಗೂ ಕಾಟಿಪಳ್ಳ ಇನ್ ಫಾಂಟ್ ಮೇರಿ ಶಾಲೆಯ ಜಾಹ್ನವಿ ಅರ್.ಪೂಜಾರಿ,ಬಾಲಕರ ವಿಭಾಗದಲ್ಲಿ ಇನ್ ಫಾಂಟ್ ಮೇರಿ ಶಾಲೆಯ ಹರ್ಷಿತ್,ಬಜ್ಪೆ ಸೈಂಟ್ ಜೊಸೇಫ್ ನ ದರ್ಶನ್ ಎಂ. 


ಬೆಸ್ಟ್ ರನ್ನರ್ ಆಗಿ ಹೊರಹೊಮ್ಮಿದ ಕ್ರೀಡಾಪಟುಗಳಾಗಿ  ಬಾಲಕಿಯರ ವಿಭಾಗದಲ್ಲಿ ಇನ್ ಫಾಂಟ್ ಮೇರಿ ಶಾಲೆಯ ಜಯಲಕ್ಷ್ಮೀ,ಸದಾಶಿವ ನಗರದ ಪಿ.ಎಂ ಶ್ರೀ ಉನ್ನತೀಕರಿಸಿದ ಹಿ.ಪ್ರಾ ಶಾಲೆಯ ಇಫಾ,ಬಾಲಕರ ವಿಭಾಗದಲ್ಲಿ ಸೈಂಟ್ ಅ್ಯನ್ಸ್ ಕುಂಟಿಕಾನದ ಸನ್ವಿತ್,ಕಾಟಿಪಳ್ಳ ಇನ್ ಫಾಂಟ್ ಮೇರಿ ಶಾಲೆಯ ಮಯೂರ್ 


ಅಲ್ ರೌಂಡರ್ ಗಳಾಗಿ ಬಾಲಕಿಯರ ವಿಭಾಗದಲ್ಲಿ ಕಾಟಿಪಳ್ಳ ಇನ್ ಫಾಂಟ್ ಮೇರಿ ಶಾಲೆಯ ತೃಪ್ತಿ,ಕನ್ನಿಕಾ ಶೆಟ್ಟಿ,ಬಾಲಕರ ವಿಭಾಗದಲ್ಲಿ ಕಾಟಿಪಳ್ಳ ಇನ್ ಫಾಂಟ್ ಮೇರಿ ಶಾಲೆಯ ಹಸನ್ ಸಾದ್,ಕೌಶಲ್
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ