ತೋಕೂರು:ಸ್ವಚ್ಛತಾ ಶ್ರಮದಾನ ಹಾಗೂ 'ಉಸಿರಿಗಾಗಿ ಹಸಿರು' - ಗಿಡ ನೆಡುವ ಕಾರ್ಯಕ್ರಮ
Wednesday, August 13, 2025
ತೋಕೂರು:ಜಿಲ್ಲಾ, ರಾಜ್ಯ ಮತ್ತು ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು,ಹಳೆಯಂಗಡಿ
ಇದರ ಆಶ್ರಯದಲ್ಲಿ ಆ.10 ರಂದು ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆ, ತೋಕೂರು ಇಲ್ಲಿ ಏಕ್ ಪೇಡ್ ಮಾ ಕೇ ನಾಮ್ 2025 - 26 ಅಭಿಯಾನದ ಮುಂದುವರಿದ ಭಾಗವಾಗಿ ಸ್ವಚ್ಛತಾ ಶ್ರಮದಾನ ಹಾಗೂ 'ಉಸಿರಿಗಾಗಿ ಹಸಿರು' - ಗಿಡ ನೆಡುವ ಕಾರ್ಯಕ್ರಮ ವು ನಡೆಯಿತು.ಸ್ವಚ್ಛ ಶಾಲೆ - ಸುಂದರ ಶಾಲೆ ಎಂಬ ಹೀರ್ಷಿಕೆಯಡಿ
ಶಾಲಾ ಆವರಣವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡುವ ಉದ್ದೇಶದಿಂದ ಶಾಲೆಯ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಲಾಯಿತು.ಸುತ್ತಮುತ್ತಲಿನಲ್ಲಿನ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛ ಮಾಡಲಾಯಿತು. ಕಸದ ವಿಂಗಡಣೆ, ಪ್ಲಾಸ್ಟಿಕ್ ತೆರವು, ಅನಗತ್ಯ ಹುಲ್ಲು, ಕಳೆ ಗಿಡಗಳನ್ನು ಕಿತ್ತು,ಗಿಡ-ಮರಗಳಿಗೆ ನೀರೆರೆದು ನಿರ್ವಹಣೆ ಕಾರ್ಯವನ್ನು ಮಾಡಿದರು. ನಂತರ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸೇರಿ ಗಿಡಗಳನ್ನು ನೆಟ್ಟರು.
ಶ್ರಮದಾನದಲ್ಲಿ ಪಡುಪಣಂಬೂರು ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್, ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರ ಸುವರ್ಣ, ಕ್ರೀಡಾ ಕಾರ್ಯದರ್ಶಿ ಗೌತಮ್ , ಕ್ರಿಕೆಟ್ ತಂಡದ ಉಪನಾಯಕ ಸಚಿನ್ ಆಚಾರ್ಯ,ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಸುರೇಖಾ ಕಲ್ಲಾಪು, ಮಹಿಳಾ ಕಾರ್ಯದರ್ಶಿ ಶ್ರೀಮತಿ ಶೈಲ ಶೆಟ್ಟಿಗಾರ್, ನಿಕಟ ಪೂರ್ವ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಚಂದ್ರಶೇಖರ್ ದೇವಾಡಿಗ, ಸೋಮನಾಥ್,ಮಾ. ಅಹನ್ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.