
ಆ.17:ನಾಥಪಂಥ ಜೋಗಿ ವಧು ವರ ವೇದಿಕೆ-2025 ಆಯೋಜಿಸುವ 3ನೇ ರಾಷ್ಟ್ರ ಮಟ್ಟದ ವಧು-ವರರ ಪರಿಚಯ ಕಾರ್ಯಕ್ರಮ
Wednesday, August 13, 2025
ಕೈಕಂಬ : ಮಂಗಳೂರು ತಾಲೂಕಿನ ಮಳಲಿ ಮಟ್ಟಿಯ ಜೋಗಿ ಮಠದ(ರಿ) ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಾಥಪಂಥ ಜೋಗಿ ವಧು ವರ ವೇದಿಕೆ-2025 ಆಯೋಜಿಸುವ 3ನೇ ರಾಷ್ಟ್ರ ಮಟ್ಟದ ವಧು-ವರರ ಪರಿಚಯ ಕಾರ್ಯಕ್ರಮ ಆ. 17 ಭಾನುವಾರ ಬೆಳಿಗ್ಗೆ 10:30ಕ್ಕೆ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಕದ್ರಿ ಜೋಗಿಮಠದ ಶ್ರೀ ಯೋಗಿರಾಜ ನಿರ್ಮಲನಾಥ ಮಹಾರಾಜ್ ಅವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಮಟ್ಟಿಯ ಪ್ರಧಾನ ಅರ್ಚಕ ಉಮೇಶ್‍ನಾಥ ಕದ್ರಿ ಅವರು ಉದ್ಘಾಟಿಸಲಿದ್ದಾರೆ. ಡಾ. ಪೂರ್ಣಿಮಾ ಜೋಗಿ ಆಶಯ ಭಾಷಣ ಮಾಡಲಿರುವ ಸಭಾ ಕಾರ್ಯಕ್ರಮದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಹರಿರಾವ್ ಕೈಕಂಬ, ಶ್ರೀ ಕ್ಷೇತ್ರ ಮಟ್ಟಿಯ ಆಡಳಿತ ಮೊಕ್ತೇಸರ ಕೆ. ಗಂಗಾಧರ ಜೋಗಿ ಮತ್ತಿತರ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಧು ವರರ ವೇದಿಕೆಯ ಪ್ರಮುಖರ 8431388588/9845795284/9964019252/9980247780/9611827517 ಈ ಸಂಖ್ಯೆಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.