ಸಭಾಕಂಪನ ಮತ್ತು ವಿದ್ಯಾರ್ಥಿಗಳು’ ಕುರಿತು ಉಪನ್ಯಾಸ
Sunday, August 24, 2025
ಕಟೀಲು : ಸಭಾಕಂಪನ ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆ. ಧನಾತ್ಮಕ ಚಿಂತನೆ, ಅಧ್ಯಯನ, ಸಿಕ್ಕ ಅವಕಾಶದ ಸದ್ ಬಳಕೆ ಮಾಡಿಕೊಳ್ಳುತ್ತ ಸಭಾಕಂಪನದಿಂದ ಮುಕ್ತರಾಗಿ, ಯಶಸ್ಸಿನೆಡೆಗೆ ಸಾಗಬೇಕು ಎಂದು ಖ್ಯಾತ ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರು ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಸ್ಪೀಕರ್ಸ್ ಕ್ಲಬ್ ಮತ್ತು ರೋವರ್ಸ್ ರೇಂಜರ್ಸ್ ಘಟಕದ ಆಶ್ರಯದಲ್ಲಿ ನಡೆದ ’ಸಭಾಕಂಪನ ಮತ್ತು ವಿದ್ಯಾರ್ಥಿಗಳು’ ಕುರಿತು ಉಪನ್ಯಾಸ ನೀಡಿದರು.
ಪ್ರಾಂಶುಪಾಲೆ ಕುಸುಮಾವತಿ, ಉಪನ್ಯಾಸಕರಾದ ಶ್ವೇತಾ ಶೆಟ್ಟಿ, ತನುಜಾ ಶೆಟ್ಟಿ, ರಂಜತ್, ಸಾನ್ವಿ ಶೆಟ್ಟಿ, ನಿಸರ್ಗ್ ಮತ್ತಿತರರಿದ್ದರು. ಸೃಷ್ಟಿ ಸ್ವಾಗತಿಸಿದರು. ತಪಸ್ಯಾ ನಿರೂಪಿಸಿದರು.