ಗಿಡ ನೆಟ್ಟು ಬೆಳೆಸಬೇಕು - ಸದಾನಂದ ಆಸ್ರಣ್ಣ
Sunday, August 10, 2025
ಕಟೀಲು : ಗಿಡ ನೆಟ್ಟು ಬೆಳೆಸಬೇಕು. ಅವುಗಳು ಬೆಳೆದು ನೀಡುವ ಹೂವು ಕಾಯಿ ಹಣ್ಣುಗಳು ನಮಗೆ ಆನಂದವನ್ನು ನೀಡುತ್ತವೆ. ಅವುಗಳೊಂದಿಗೆ ನಾವೂ ಬೆಳೆಯಬೇಕು ಎಂದು ಕಟೀಲು ದೇಗುಲದ ಅರ್ಚಕ ಸದಾನಂದ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ವಿತರಿಸಿ ಮಾತನಾಡಿದರು.
ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಪ್ರಕಾಶ ಆಚಾರ್ ಕಿನ್ನಿಗೋಳಿ, ಮುಖ್ಯ ಶಿಕ್ಷಕರಾದ ಸರೋಜಿನಿ, ಚಂದ್ರಶೇಖರ ಭಟ್, ಕೃಷ್ಣ, ರಾಜೇಶ್, ಭವ್ಯ ಮತ್ತಿತರರಿದ್ದರು.