ಮಕಾಶಿಫುಲ್ ಉಲೂಮ್ ಮದರಸದ ನೂತನ ಕಟ್ಟಡದ ಶಂಕು ಸ್ಥಾಪನೆ
Monday, July 28, 2025
ಮೂಲ್ಕಿ:ಶಾಫಿ ಜುಮ್ಮಾ ಮಸೀದಿ (ರಿ) ಕೆ.ಎಸ್.ರಾವ್ ನಗರ ಮೂಲ್ಕಿಯ ಮಕಾಶಿಫುಲ್ ಉಲೂಮ್ ಮದರಸದ ನೂತನ ಕಟ್ಟಡದ ಶಂಕು ಸ್ಥಾಪನೆಯು ಜುಮ್ಮಾ ನಮಝಿನ ಬಳಿಕ ನಡೆಯಿತು.
ದ.ಕ ಜಿಲ್ಲಾ ಸಂಯುಕ್ತ ಖಾಝಿಗಳಾಗಿರುವ ಬಹುಮಾನ್ಯ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶಂಕು ಸ್ಥಾಪನೆಯನ್ನು ನೆರವೇರಿಸಿದರು.
ಬಹು ಶೈಖುನ ಬೊಳ್ಳೂರು ಉಸ್ತಾದ್ ದುಅ ಆಶಿರ್ವಚನ ನೀಡಿದರು.
ಶಾಫಿ ಜುಮ್ಮಾ ಮಸೀದಿ ಖತೀಬರಾಗಿರುವ ಬಹು ಶರೀಫ್ ದಾರಿಮಿ ಅಲ್ ಹೈತಮಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಬಶೀರ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ ಅಖ್ದೂದ್ ಕಂಪೆನಿ ಸೌದಿ ಅರಬಿಯ ಇದರ ಪಾಲುದಾರ ಉಮ್ಮರ್ ಫಾರೂಕ್,ಉದ್ಯಮಿ ಅಬ್ಬಾಸ್, ಮಂಗಳೂರು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಜನಾಬ್ ಫಕೀರಬ್ಬ ಮಾಸ್ಟರ್, ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಅಹಮ್ಮದ್ ಭಾವ ಎಂ.ಕೆ,ಮುಸ್ತಫಾ, ಎಎಚ್ ರಫೀಕ್,ಎಂಇ ಹನೀಫ್, ಗಣ್ಯರು ಜಮಾಅತ್ ಭಾಂಧವರು ಉಪಸ್ಥಿತರಿದ್ದರು.
ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ ಎಮ್ ಆಸೀಫ್ ಸ್ವಾಗತಿಸಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಎಂ ಇಸ್ಮಾಯಿಲ್ ಕೊಲ್ನಾಡು ಧನ್ಯವಾದವಿತ್ತರು.