ಕಟೀಲು:ಪರ್ಯಾಯ ಪೂರ್ವಭಾವಿ ಸಂಚಾರ ಹಾಗೂ ಕ್ಷೇತ್ರ ದರ್ಶನ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥಶ್ರೀಪಾದರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು. ದೇವಳದ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.ಈ ಸಂದರ್ಭ ದೇವಳದ ಅಸ್ರಣ್ಣ ವೃಂದದವರು ಉಪಸ್ಥಿತರಿದ್ದರು.