ಬೈಕ್ ಡಿಕ್ಕಿ,ಪಾದಚಾರಿ ಸಾವು
Monday, June 30, 2025
ಬಜಪೆ :ಬೈಕ್ ಡಿಕ್ಕಿಯಾಗಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊರ್ವರು ಮೃತಪಟ್ಟ ಘಟನೆ ಎಕ್ಕಾರು ದುರ್ಗಾನಗರ ತಿರುವಿನಲ್ಲಿ ನಡೆದಿದೆ.ಘಟನೆಯಲ್ಲಿ ಎಕ್ಕಾರು ದುರ್ಗಾನಗರ ನಿವಾಸಿ ರವಿ(50) ಮೃತರು.
ಕಟೀಲು ಕಡೆಯಿಂದ ಬಜಪೆ ಕಡೆಗೆ ಸವಾರ ನಿತೇಶ್ ಶೆಟ್ಟಿ ಎಂಬುವವರು ಚಲಾಯಿಸುತ್ತಿದ್ದ ಬೈಕ್ ಪಾದಚಾರಿಗೆ ಡಿಕ್ಕಿಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ರವಿಯವರು ರಸ್ತೆಯಂಚಿಗೆ ಎಸೆಯಲ್ಪಟ್ಟು ತಲೆ ಹಾಗೂ ಕೈ ಗೆ ಗಂಭೀರವಾಗಿ ಗಾಯಗಳಾಗಿದ್ದು,ಗಾಯಗೊಂಡ ರವಿ ಯವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಬೈಕ್ ಸವಾರನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದೆ. ಬಗ್ಗೆ ಬಜಪೆ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.