ಅಡ್ಯಾರುಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ,ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 2 ಲ.ರೂ ಅನುದಾನ
Wednesday, June 11, 2025
ಮಂಗಳೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ಬಜಪೆ ತಾಲೂಕಿನ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಅಡ್ಯಾರು ಪದವು ಮಂಗಳೂರು ಇಲ್ಲಿನ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲ.ರೂ ಅನುದಾನ ಮಂಜೂರಾದ್ದು,ಇದರ ಮಂಜೂರಾತಿ ಡಿ ಡಿ ಯನ್ನು ಬಜಪೆ ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ ಅವರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ,ಆಡಳಿತ ಮಂಡಳಿಯ ಗೌರವಾಧ್ಯಕ್ಷ ರಾಜರತ್ನ ,ಸುನಿಲ್ ಜಪ್ಪು, ಅಧ್ಯಕ್ಷ ಮನೋಜ್ ಪೂಜಾರಿ , ಶ್ರವಣ್ ಶೆಟ್ಟಿ ಮೊಗರು ಗುತ್ತು , ಸುಜಿತ್ ಕುಮಾರ್, ಗೌರವ ಡಿ ಶೆಟ್ಟಿ ಯವರಿಗೆ ವಿತರಿಸಿದರು.ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಸುಂದರ್ ಸುವರ್ಣ ,ಶಂಕರ್ ಪೂಜಾರಿ, ಜಯಂತ್ ಕುಮಾರ್ ,ವಲಯದ ಮೇಲ್ವಿಚಾರಕಿ ಶ್ರೀಮತಿ ಸುಜಾತ ,ಸೇವಾ ಪ್ರತಿನಿಧಿ ವಜ್ರಾಕ್ಷಿ ,ಸತ್ಯಾಕ್ಷಿ ,ಒಕ್ಕೂಟದ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.