ಎಕ್ಕಾರಿನಲ್ಲಿ ಮಕ್ಕಳ ಬೇಸಿಗೆ ಶಿಬಿರ
Thursday, May 8, 2025
ಬಜಪೆ:ಗ್ರಾಮೀಣ ಭಾಗದ ಮಕ್ಕಳಿಗಾಗಿ ಆಯೋಜನೆಗೊಂಡ ಬೇಸಿಗೆ ಶಿಬಿರವು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ ಎಂದು ಎಕ್ಕಾರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರವೀಣ್ ಆಚಾರ್ಯ ಹೇಳಿದರು.ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಎಕ್ಕಾರು ಗ್ರಾಮಪಂಚಾಯತ್ ನ ಅರಿವು ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿ ಮಾತನಾಡಿದರು.ಶಿಬಿರದಲ್ಲಿ ನೈತಿಕ ಶಿಕ್ಷಣ,ಅಂಚೆ ಇಲಾಖೆ,ಪಂಚಾಯತ್ ,ಶಿಸ್ತು,ಸಮಯ ಪ್ರಜ್ಞೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.ಅಲ್ಲದೆ ಡ್ರಾಯಿಂಗ್,ಪೈಂಟಿಂಗ್,ಹಾಡುಗಾರಿಕೆ ಸಹಿತ ವಿವಿಧಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಎಕ್ಕಾರು ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ನಿವೃತ್ತ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಇಂದಿರಾ,ಶಿಕ್ಷಕರಾದ ಶ್ರೀಮತಿ ದೀಪಿಕಾ ಆಚಾರ್ಯ,ಸ್ವಸ್ತಿಕ್ ಆಚಾರ್ಯ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿಗಳನ್ನು ನೀಡಿದರು.ಶಿಬಿರದಲ್ಲಿ ಒಟ್ಟು 46 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಚಾರ್ಯ,ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ಕಾರ್ಯದರ್ಶಿ ಕಮಲಾಕ್ಷ,ಗ್ರಂಥಪಾಲಕಿ ಶ್ರೀಮತಿ ಹೇಮಲತಾ ಜೆ ಶರ್ಮಾ, ಶ್ರೀಮತಿ ಸವಿತಾ,ಶ್ರೀಮತಿ ಸಂಧ್ಯಾ,ಶ್ರೀಮತಿ ರೇಷ್ಮಾ,ಶ್ರೀಮತಿ ಅಮೃತಕಲಾ,ಕು.ಜಯಲಕ್ಷ್ಮೀ ,ಎಕ್ಕಾರು ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.