ತೋಕೂರು: ಮದ್ದೇರಿ ದೈವಸ್ಥಾನಕ್ಕೆ ಚೆಯರ್ ಗಳ ಹಸ್ತಾಂತರ
Friday, May 30, 2025
ತೋಕೂರು:10 ನೇ ತೋಕೂರು ಗ್ರಾಮದ ತೋಕೂರು ಮದ್ದೇರಿ ದೈವಸ್ಥಾನದ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಮದ್ದೇರಿ ಸಾನದಲ್ಲಿ ಉಲ್ಲಾಯ, ಮೈಸಂದಾಯ, ಕಾಂತೇರಿ ಜುಮಾದಿ ಬಂಟ, ಸಾರಾಳ ಜುಮಾದಿ ಬಂಟ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವದ ಅಂಗವಾಗಿ 'ನಮ್ಮ ಜವನೆರ್' ತೋಕೂರು ಇವರ ವತಿಯಿಂದ ನಡೆದ "ಪೊರಿಪುದಪ್ಪೆ ಜಲದುರ್ಗೆ" ನಾಟಕಕ್ಕೆ ಊರ ಪರವೂರ ದಾನಿಗಳು ಸಹಕಾರ ನೀಡಿರುವುದರಿಂದ ಬಹಳ ವಿಜೃಂಭಣೆಯಿಂದ ನಡೆಯಿತು.ಇದರಿಂದ ಉಳಿದ ಹಣದಿಂದ ಮದ್ದೇರಿ ದೈವಸ್ಥಾನಕ್ಕೆ ಸುಮಾರು 25ಸಾವಿರ ವೆಚ್ಚದ ಚೆಯರ್ ಗಳನ್ನು ನೀಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಮೋಹನ್ ದಾಸ, ಪ್ರಧಾನ ಕಾರ್ಯದರ್ಶಿ ಹೇಮನಾಥ ಅಮೀನ್, ಕೋಶಾಧಿಕಾರಿ ಪುರುಷೋತ್ತಮ ಕೋಟ್ಯಾನ್, ಬೆಂಗಳೂರು ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,ಸತೀಶ್ ಮೂಲ್ಯ ನೇಲ್ಯಇಲ್, ನಮ್ಮ ಜವನೆರ್ ತಂಡದ ಗಣೇಶ್ ಪೂಜಾರಿ, ಜಗದೀಶ್ ಕುಲಾಲ್,ಸಂತೋಷ್ ದೇವಾಡಿಗ, ಮುಖೇಶ್ ಸುವರ್ಣ, ಧರ್ಮಾನಂದ ಶೆಟ್ಟಿಗಾರ್ ಮತ್ತು ದೈವಸ್ಥಾನದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸದಸ್ಯೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.