ಮುಲ್ಕಿ:ವಿಜೃಂಭಣೆಯ ಬಾಕ್ಯಾರು ಗಡುಬಾಡು ನೇಮೋತ್ಸವ
Thursday, May 15, 2025
ಮುಲ್ಕಿ: ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತಕ್ಕೆ ಒಳಪಟ್ಟ ಬಾಕ್ಯಾರು ಗಡುಬಾಡು ನೇಮೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳವಾರ ರಾತ್ರಿ 7 ಗಂಟೆಗೆ ಭಂಡಾರ ಇಳಿಯುವುದು, ಮಹಾ ಅನ್ನ ಸಂತರ್ಪಣೆ,ಬಾಕ್ಯಾರು ಗಡುಬಾಡು ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಗುತ್ತಿನಾರ್ ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ,ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ವಿಜಿತ್ ಶೆಟ್ಟಿ,ಗಂಗಾಧರ ಶೆಟ್ಟಿ ಬರ್ಕೆ ತೋಟ, ಜನಾನಂದ ಶೆಟ್ಟಿ ತಿಂಗೊಳೆ ಮನೆ,ವಿವೇಕ್ ಶೆಟ್ಟಿ ಬಟಾರ ಬಾಳಿಕೆ ಮನೆ, ಮಟ್ಟು ನವೀನ್ ಚಂದ್ರ ಪ್ರಭು ಮೈಲೊಟ್ಟು , ಉತ್ತಮ್ ಮೈಲೊಟ್ಟು ವಸಂತ್ ಪೂಜಾರಿ ನಡಿ ಕೊಪ್ಪಲ,ದಯಾನಂದ ಕೋಟ್ಯಾನ್ ಮಟ್ಟು, ವೆಂಕಟೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು