-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೇ.15- 17 ಗುರುಪುರದ ಗುರುಮಹಾಕಾಲೇಶ್ವರ ಏಕಶಿಲಾ  ಬೃಹತ್ ವಿಗ್ರಹ  ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮ

ಮೇ.15- 17 ಗುರುಪುರದ ಗುರುಮಹಾಕಾಲೇಶ್ವರ ಏಕಶಿಲಾ ಬೃಹತ್ ವಿಗ್ರಹ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮ

ಕೈಕಂಬ : ಗುರುಪುರ ಫಲ್ಗುಣಿ ನದಿತಟದ ಗೋಳಿದಡಿಗುತ್ತು ಗುರುಪುರದ ಗುರುಮಹಾಕಾಲೇಶ್ವರ ಏಕಶಿಲಾ  ಬೃಹತ್ ವಿಗ್ರಹ  ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮವು ಮೇ 15ರಿಂದ 17ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

 ಅವರು ಗುರುಪುರ ಗೋಳಿದಡಿ ಗುತ್ತಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿರುವ ಗುರುಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿ ಇದಾಗಿದ್ದು, ವೇದಕೃಷಿಕ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ವೇದೋಕ್ತ ವಿಧಿಗಳೊಂದಿಗೆ ಪ್ರತಿಷ್ಠೆ, ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಭಕ್ತರು ಜಾತಿ, ಮತ ಭೇದವಿಲ್ಲದೆ ಇಲ್ಲಿ ದೇವರನ್ನು ಸ್ಪರ್ಶಿಸಿ ಪೂಜೆ ಮಾಡಬಹುದಾಗಿದೆ ಎಂದರು.

ಮೇ 15ರಂದು  ಶುದ್ಧಿ ಪ್ರಕ್ರಿಯೆ, ವಾಸ್ತುಶುದ್ಧಿ ಸಹಿತ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 9ರಿಂದ ಭಜನೆ, ಯಕ್ಷಗಾನ, ಸಂಜೆ 5ರಿಂದ ಭಗವದ್ಗೀತೆ ಪ್ರವಚನ, ಭರತನಾಟ್ಯ, ನೃತ್ಯಾಂಜಲಿ, ಮೇ 16ರಂದು ಸಂಜೆ 4 ಗಂಟೆಯಿಂದ ಮಹಾಕಾಲೇಶ್ವರ ದೇವರ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕ, ಹಾಲು, ಎಳನೀರು, ಕುಂಕುಮ, ಹರಿದ್ರೋದಕ ಮತ್ತು ಗಂಧೋದಕ ಸಹಿತ ಪಂಚ ಕಲ್ಯಾಣಯುಕ್ತ ಅಭಿಷೇಕ, ಬೆಳಿಗ್ಗೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಮೇ 17ರಂದು ಬೆಳಿಗ್ಗೆ ಭಜನೆ, ಹರಿಕಥಾ ಪ್ರವಚನ, ಭಗವದ್ಗೀತಾ ಪ್ರವಚನ, ನೃತ್ಯ ವೈಭವ ಜರುಗಲಿದೆ ಎಂದರು.



ಗೋಳಿದಡಿಗುತ್ತಿನ ಗಡಿಕಾರ ಸುಕ್ಷೇತ್ರದ  ಅಧ್ಯಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಮೇ 16ರಂದು ದೇವಸ್ಥಾನದ ಕಾರ್ಯಾಲಯ, ಸಭಾಂಗಣ ಹಾಗೂ ಅತಿಥಿಗೃಹವನ್ನು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಗುರುಗಳು ಉದ್ಘಾಟಿಸುವರು. ಮೇ 14ರ ಮಧ್ಯಾಹ್ನ 3ರಿಂದ ಮೇ 15ರ ಸಂಜೆ 6ರವರೆಗೆ ಹೊರೆಕಾಣಿಕೆ ಸಮರ್ಪಿಸಬಹುದು. ಗುರುಮಹಾಕಾಲೇಶ್ವರ ಮೂರ್ತಿಯನ್ನು ಬೆಳ್ತಂಗಡಿ ಮಂಜುಶ್ರೀ ಶಿಲ್ಪಕಲಾಶಾಲೆಯ ವೆಂಕಟೇಶ ಆಚಾರ್ಯ ಮಾರ್ಗದರ್ಶನದಲ್ಲಿ ಕುಮಾರ ಶರ್ಮ ಅವರು ರಚಿಸಿದ್ದಾರೆ ಎಂದರು.

ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು,ಶ್ರೀ ಗುರು ಮಹಾಕಾಲೇಶ್ವರ ರಿಲೀಜಿಯಸ್  ಮತ್ತು ಚಾರಿಟೇಬಲ್  ಟ್ರಸ್ಟ್(ರಿ) ನ ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ, ಬ್ರಹ್ಮ ಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಯಶವಂತ್ ಸಾಲ್ಯಾನ್ ಮೂಲ್ಕಿ, ನಾರಾಯಣ, ಸತೀಶ್ ಕಾವ, ಸುನಿಲ ಪ್ರಭಾಕರ ಶೆಟ್ಟಿ, ರತನ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ