ಸಸಿಹಿತ್ಲು ಉತ್ಥಾನ ಬಳಗ ಸಮಾಜಕ್ಕೆ ಮಾದರಿ : ಗೌರೀಶಂಕರ್
Wednesday, April 30, 2025
ಮೂಲ್ಕಿ : ಉತ್ಥಾನ ಬಳಗದ ಕಾರ್ಯಚಟುವಟಿಕೆ ಸಮಾಜಕ್ಕೆ ಮಾದರಿಯಾಗಿದೆ, ಇಂದು ಸಮಾಜದಲ್ಲಿ ನೈತಿಕತೆ ಕುಸಿಯುತಿದೆ, ಯುವ ಜನತೆ ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿಯುತ್ತಿದ್ದಾರೆ. ಶಿಸ್ತು,ಪ್ರಾಮಾಣಿಕತೆ ಕ್ಷೀಣಿಸುತ್ತಿದೆ. ಇಂತಹ ವಾತಾವರಣದಲ್ಲಿ ಸಂಘಟನೆಗಳ ಪಾತ್ರ ತುಂಬಾ ಮುಖ್ಯ ಎಂದು
ಅವರು ಸಸಿಹಿತ್ಲುವಿನ ಉತ್ಥಾನ ಬಳಗ ಸಂಸ್ಥೆಯ 40ನೇ ವಾರ್ಷಿಕೋತ್ಸವ ಹಾಗು ವಿದ್ಯಾ ಸಮೃದ್ದಿ ನಿಧಿ ಲೋಕಾರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುರತ್ಕಲ್ ಎನ್ ಐಟಿಕೆಯ ಡೀನ್ ಚಿತ್ತರಂಜನ್ ಹೆಗ್ಡೆ ಅವರು ವಿವಿಧ ಸಮಾಜ ಸೇವೆಗೆ ಚಾಲನೆ ನೀಡಿ, ಸೇವೆ, ಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಾದರಿ ಸಂಸ್ಥೆಯಾಗದಲ್ಲಿ ಸಮಾಜವು ಸಹ ಪ್ರೋತ್ಸಾಹಿಸುತ್ತದೆ ಎಂದರು.
ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಸಿಹಿತ್ಲು ಭಗವತಿ ಕ್ಷೇತ್ರದ ಪ್ರಧಾನ ಮೊಕ್ತೇಸರ ಶ್ರೀನಿವಾಸ ಪೂಜಾರಿ ಶುಭಹಾರೈಸಿದರು.
ಸಂಸ್ಥೆಯ ವಿಶ್ವಸ್ಥರಾದ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭ ರೂ.25 ಲಕ್ಷ ಮೊತ್ತದ ವಿದ್ಯಾ ಸಮೃದ್ದಿ ನಿಧಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಯಿತು. ರೂ. 60 ಸಾವಿರ ಮೊತ್ತದ ವಿದ್ಯಾರ್ಥಿ ವೇತನ ಹಾಗೂ ನೆರವನ್ನು ವಿತರಿಸಲಾಯಿತು.
ವಿದ್ಯಾನಿಧಿಗೆ ರೂ. 12 ಲಕ್ಷವನ್ನು ಮುಂಬೈ ಉದ್ಯಮಿ ಮೋಹನ್ ಭಟ್ ಹಾಗೂ ರೂ. 10 ಲಕ್ಷ ದೇಣಿಗೆಯನ್ನು ಸಸಿಹಿತ್ಲು ವಿನ ಇಂದುಶ್ರೀ ಪರಿವಾರ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಬ್ರಹ್ಮಣ್ಯ ಭಟ್, ಚಂದ್ರಕುಮಾರ್, ಜಯಶ್ರೀ, ದಿ.ತಂಗಿಯಕ್ಕ ಮನೆಯವರು, ಲೆಫ್ಟಿನೆಂಟ್ ಸುಹಾಸ್ ಕೆ ಅವರನ್ನು ಸನ್ಮಾನಿಸಲಾಯಿತು.
ರೋಹಿತಾಕ್ಷಾ ಸ್ವಾಗತಿಸಿದರು, ಗುರುರಾಜ್ ಸಸಿಹಿತ್ಲು ಪ್ರಾಸ್ತಾವನೆಗೈದರು,
ಸುಭಾಷ್ ವಂದಿಸಿದರು,
ಸದಸ್ಯರಿಂದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು.
"ಅಮ್ಮು ಆಮುಂಡರಾ" ತುಳು ನಾಟಕ ಪ್ರದರ್ಶನಗೊಂಡಿತು.