ಸಸಿಹಿತ್ಲು : ನಡಾವಳಿ ಉತ್ಸವದ ಪೂರ್ವಭಾವಿಯಾಗಿ ಗೊನೆ ಮುಹೂರ್ತ
Sunday, April 13, 2025
ಹಳೆಯಂಗಡಿ :ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ರವಿವಾರ ನಡೆಯಲಿರುವ ನಡಾವಳಿ ಉತ್ಸವದ ಪೂರ್ವಭಾವಿಯಾಗಿ ಕದಿಕೆಯಲ್ಲಿ ಗೊನೆ ಮುಹೂರ್ತ ನಡೆಯಿತು.
ಈ ಸಂದರ್ಭ ಕ್ಷೇತ್ರದ ಪ್ರದಾನ ಅರ್ಚಕರಾದ ಶ್ರೀ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಧ್ಯಕ್ಷ ವಾಮನ್ ಇಡ್ಯಾ,ಕದಿಕೆ ತೀಯಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರಾ, ಏಳೂರ ಗುರಿಕಾರರು,ಆಚಾರ ಪಟ್ಟವರು ಮತ್ತು ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.