ಕೆರೆಕಾಡು ಭಗವದ್ಗೀತಾ ಕಲಿಕಾ ಶಿಬಿರದ ಸಮಾರೋಪ
Sunday, April 13, 2025
ಮೂಲ್ಕಿ:ಮಕ್ಕಳಲ್ಲಿ ಸತ್ಸಂಗದ ಪರಿಜ್ಞಾನ ಬೆಳೆಸಿರಿ, ಭಜನಾ ಮಂದಿರ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು ಹೇಳಿದರು.
ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಭಗವದ್ಗೀತಾ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಭಗವದ್ಗೀತಾ ಕಲಿಕಾ ಶಿಬಿರವನ್ನು ನಡೆಸಿಕೊಟ್ಟ ಕಟೀಲು ಶಾಲೆಯ ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಕಟೀಲು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಎಳತ್ತೂರು ಶಕ್ತಿದರ್ಶನದ ದೇವದಾಸ್ ರಾವ್ ಗುರೂಜಿ, ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ದಮಯಂತಿ ಕೆರೆಕಾಡು, ಪುನರೂರು ವಿಪ್ರಸಂಪದದ ಅಧ್ಯಕ್ಷ ಸುಧಾಕರ್ ರಾವ್ ಎಸ್‌ಕೋಡಿ, ಮಂದಿರದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಕೆರೆಕಾಡು,
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ, ಜ್ಯೋತಿ ದೇವದಾಸ್ ರಾವ್, ಶೀನ ಕೆರೆಕಾಡು, ಮಾಧವ ಶೆಟ್ಟಿಗಾರ್, ರಶ್ಮಿ ಶ್ರೀವತ್ಸ, ಲಲಿತಾ ಭಾಸ್ಕರ್, ರತ್ನಾ ಶಿವಾನಂದ, ಸೌಮ್ಯ ಭಟ್, ಗಾಯತ್ರಿ ಉಮೇಶ್, ಗಾಯತ್ರಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಚೇತನ್ ಪುನರೂರು ಸ್ವಾಗತಿಸಿದರು, ನವ್ಯ ಶ್ರೀ ವಂದಿಸಿದರು.