
ಪುತ್ತಿಗೆ ಜಾತ್ರೆ,ಇಂದು ಆಳುಪಲ್ಲಕಿ ಉತ್ಸವ,ನಾಳೆ ಹಗಲು ರಥೋತ್ಸವ
Friday, April 25, 2025
ಮೂಡಬಿದಿರೆ:ಶ್ರೀಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿವರ್ಷಾವಧಿಜಾತ್ರೆಯು ಆರಂಭಗೊಂಡಿದ್ದು, ಜಾತ್ರೆಯ ಅಂಗವಾಗಿ 'ಆಳುಪಲ್ಲಕ್ಕಿ ಉತ್ಸವ' ವು ಇಂದು ನಡೆಯಲಿದೆ. ನಾಳೆ (ಶನಿವಾರ) ಹಗಲು ರಥೋತ್ಸವ, ಮಹಾಅನ್ನಸಂತರ್ಪಣೆ ನಡೆಯಲಿದೆ. ಆದಿತ್ಯವಾರ ದಂದು ಕವಾಟೋದ್ಘಾಟನೆ, ತುಲಾಭಾರಸೇವೆ, ರಾತ್ರಿ ಉಮಿಗುಂಡಿಯಲ್ಲಿ ಅವಭ್ರಥ, ಕ್ಷೇತ್ರಪಾಲ ದೈವ ಹಾಗೂ ದೇವರ ಭೇಟಿ, ಅಗ್ನಿಕೇಳಿಯಾಗಿ ಧ್ವಜಾವರೋಹಣ ನಡೆಯಲಿದೆ. ಎ.28ರಂದು ಪಂಚಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ.