-->


ಕಟೀಲಿನಲ್ಲಿ ದ್ವಿದಿನ ತಾಳಮದ್ದಲೆ ಕಮ್ಮಟ

ಕಟೀಲಿನಲ್ಲಿ ದ್ವಿದಿನ ತಾಳಮದ್ದಲೆ ಕಮ್ಮಟ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ದ್ವಿದಿನ ತಾಳಮದ್ದಲೆ ಕಮ್ಮಟ ಮಾರ್ಚ್ ೧೮ ಹಾಗೂ ೧೯ ರಂದು ಆಯೋಜಿಸಲಾಗಿದೆ. ಇವರ ಸಹಯೋಗದಲ್ಲಿ ನಡೆವ ಈ ಕಮ್ಮಟದಲ್ಲಿ ತಜ್ಞರು ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಬೆಳಗ್ಗೆ ೧೦ ರಿಂದ ಸಂಜೆ ೫ರ ತನಕ ಕಲಾಪಗಳು ನೆರವೇರಲಿದ್ದು ಆಸಕ್ತರು, ಅಭ್ಯಾಸಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಈ ಕಮ್ಮಟದ ಸದುಪಯೋಗ ಹೊಂದಬಹುದು.
ತಾಳಮದ್ದಲೆಯಲ್ಲಿ ಪ್ರಸಂಗ ಹಾಗೂ ಪುರಾಣಗಳ ಸಮನ್ವಯ, ಪ್ರಕೃತ ತಾಳಮದ್ದಲೆ - ಸ್ಥಿತಿ ಮತ್ತು ಗತಿ,   ತಾಳಮದ್ದಲೆ - ಔಚಿತ್ಯ ಪರಾಮರ್ಶೆ ಗೋಷ್ಟಿಗಳು ನಡೆಯಲಿವೆ. ಆಸಕ್ತರು ಪಶುಪತಿ ಶಾಸ್ತ್ರೀ, ೯೯೪೫೯೮೪೨೪೮ ಇವರನ್ನು ಸಂಪರ್ಕಿಸಬಹುದು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article