ಮೂಲ್ಕಿ ಮಿನಿ ವಿಧಾನಸೌದ ಮಾರ್ಚ್ ನಲ್ಲಿ ಲೋಕಾರ್ಪಣೆ
Tuesday, February 4, 2025
ಮೂಲ್ಕಿ: ಮೂಲ್ಕಿಯ ಗೇರುಕಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನ ಸೌಧದ ಕಾಮಗಾರಿ ಮಾರ್ಚ್ ಅಂತ್ಯದ ಒಳಗೆ ಮುಕ್ತಾಯಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲ್ಕಿಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಮಂಗಳವಾರದಂದು ಗೇರುಕಟ್ಟೆಯಲ್ಲಿನ ಮಿನಿ ವಿಧಾನಸೌಧದ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಈ ಹಿಂದಿನ ಸರಕಾರ ಇದ್ದ ಸಂದರ್ಭದಲ್ಲಿ ಯೋಜನೆ ರೂಪಿಸಿದ್ದು 10 ಕೋಟಿ ರೂ ಅನುದಾನವನ್ನು ಮೀಸಲಿರಿಸಿತ್ತು. ಕಾಮಗಾರಿ ಪ್ರಾರಂಭಿಸಿದ್ದು, ಇದೀಗ ಪ್ರಸ್ತುತ ಇರುವ ಸರಕಾರ 8 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಕಾಮಗಾರಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ. ಕಂದಾಯ ಸಚಿವರು ಮತ್ತು ಉಸ್ತುವಾರಿ ಸಚಿವರು ಉತ್ತಮ ಸ್ಪಂದನೆ ನೀಡಿದ್ದಾರೆ. ಇನ್ನೂ ಎರಡುವರೆ ಕೋಟಿ ರೂ ಹೆಚ್ಚಿನ ಅನುದಾನ ಬೇಕಾಗಿದ್ದು ಅದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಲ್ಲಿ ಶಾಸಕರ ಕಚೇರಿ ಸೇರಿದಂತೆ 9 ಇಲಾಖೆಗಳು ಬರಲಿದೆ ಒಂದೇ ಸೂರಿನಡಿ ಸಾರ್ವಜನಿಕರಿಗೆ ಸೇವೆ ನೀಡಲು ಇದು ಅನುಕೂಲವಾಗಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದೇ ವಿದಾನ ಸಭಾ ಕ್ಷೇತ್ರದಲ್ಲಿ ಎರಡು ಮಿನಿವಿಧಾನ ಸೌಧ ರಾಜ್ಯದಲ್ಲೇ ಮೊದಲು ಎಂದರು. ಈ ಸಂದರ್ಭ ಸತೀಶ್ ಅಂಚನ್, ಲಕ್ಷೀ ಸುಭಾಷ್ ಶೆಟ್ಟಿ, ರಂಗನಾಥ್ ಶೆಟ್ಟಿ, ಶೈಲೇಶ್ ಮೂಲ್ಕಿ, ವಿನೋದ್ ಬೆಳ್ಳಾಯರು,
ಅಧಿಕಾರಿಗಳಾದ ದಿಲೀಪ್ ರೋಡ್ಕರ್, ಗುತ್ತಿಗೆದಾರರು ಉಪಸ್ಥಿತರಿದ್ದರು.