ಬೆಳ್ಳಿಯ ನೂತನ ಭಾವಚಿತ್ರದ ಪ್ರತಿಷ್ಠಾಪನೆ ಮತ್ತು ಕಲಶಾಭಿಷೇಕ
Tuesday, February 4, 2025
ಕೈಕಂಬ : ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಮಂಗಳೂರು ತಾಲೂಕಿನ ಮಳಲಿ ಶ್ರೀ ರಾಮಂಜನೇಯ ಭಜನಾ ಮಂದಿರದಲ್ಲಿ ಫೆಬ್ರವರಿ 6ರ ಗುರುವಾರದಿಂದ 9ರ ಭಾನುವಾರದವರೆಗೆ ವಾರ್ಷಿಕ ಮಂಗಲೋತ್ಸವ ಸಹಿತ ಮೂರು ದಿನಗಳ ಅಖಂಡ ಮಂಗಲೋತ್ಸವ ನಡೆಯಲಿದ್ದು, ಶ್ರೀ ರಾಮಾಂಜನೇಯ ದೇವರ ಬೆಳ್ಳಿಯ ನೂತನ ಭಾವಚಿತ್ರ ಮತ್ತು ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಭಾನುವಾರ ನಡೆಯಿತು.
ಮಳಲಿ ಬೆಂಕಟರಮಣ ಮಂಗಳೂರಿನ ಶಿಲ್ಪಿ ಮಹೇಶ್ ಆಚಾರ್ಯ ರು ನಿರ್ಮಿಸಿದ ಶ್ರೀ ದೇವರ ಬೆಳ್ಳಿಯ ಭಾವಚಿತ್ರಕ್ಕೆ ವೆಂಕಟರಮಣ ದೇವಸ್ಥಾನದ ಅರ್ಚಕ ರತ್ನಾಕರ ಭಟ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳ ಕುಣಿತ ಭಜನೆ ಮತ್ತು ಪೂರ್ಣಕುಂಭ ಸಹಿತ ಭವ್ಯ ಮೆರವಣಿಗೆಯಲ್ಲಿ ಬೆಳ್ಳಿಯ ಭಾವಚಿತ್ರ ಸಹಿತ ಹೊರೆಕಾಣಿಕೆಯನ್ನು ಭಜನಾ ಮಂದಿರಕ್ಕೆ ತರಲಾಯಿತು.
ಭಜನಾ ಮಂದಿರದ ಅರ್ಚಕರಾದ ರಮೇಶ್ ಆಚಾರ್ಯ ನಾರಳ, ಸೂರ್ಯ ಭಟ್ ಮತ್ತು ಶ್ರೀಪತಿ ಭಟ್ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 10:50 ರ ಮೀನ ಲಗ್ನದ ವರ್ಗೋತ್ತಮ ನವಾಂಶ ಮುಹೂರ್ತದಲ್ಲಿ ಬೆಳ್ಳಿಯ ನೂತನ ಭಾವಚಿತ್ರದ ಪ್ರತಿಷ್ಠಾಪನೆ ಮತ್ತು ಕಲಶಾಭಿಷೇಕ ನಡೆಯಿತು.ಬಳಿಕ ಭಜನಾ ಸಂಕೀರ್ತನೆ ನಡೆಯಿತು.
ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೇಶವ ಕುಲಾಲ್,
ಸುಧಾಕರ ಕುಲಾಲ್, ವಿಠಲ ಸಫಲಿಗ ಅಧ್ಯಕ್ಷ ವೀರಪ್ಪ ಕುಲಾಲ್, ಕಾರ್ಯದರ್ಶಿ ಉಮೇಶ್ ಗಾಣಿಗ, ಭಜನಾ ಮಂದಿರದ ಅಧ್ಯಕ್ಷ ಶ್ರೀ ನಿಧಿ, ಕಾರ್ಯದರ್ಶಿ ವಿಶಾಲ್, ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ನಾರಳ, ಹರೀಶ್ ಮಟ್ಟಿ, ರಾಜೇಶ್ ಕುಲಾಲ್, ಆಶೀಶ್ ಕುಕ್ಕುರಿ,ಹರೀಶ್ ಪೈ, ಸೀತಾರಾಮ ಪೂಜಾರಿ, ಅಮೃತ ಮಹೋತ್ಸವ ಸಮಿತಿ ಮತ್ತು ಭಜನಾ ಮಂದಿರದ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳ ಪ್ರಮುಖರು, ಊರಿನ ಗಣ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.