ಕಟೀಲಿನಲ್ಲಿ 'ಸ್ವಚ್ಚ ನಂದಿನಿ' ಕಾರ್ಯಕ್ರಮ
Saturday, February 15, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯೂತ್‌ರೆಡ್‌ಕ್ರಾಸ್, ಇಕೋ ಕ್ಲಬ್ ಹಾಗೂ ಹಿರಿಯ ವಿದ್ಯಾರ್ಥಿಗಳು ಸೇರಿ ಶ್ರೀ ಕ್ಷೇತ್ರP ಟೀಲಿನ ನಂದಿನಿ ನದಿಯ ಹುಟ್ಟುಹಬ್ಬದ ದಿನ (ಮಾಘ ಶುದ್ಧ ಹುಣ್ಣಿಮೆ)ದಂದು ನಂದಿನಿ ನದಿಯನ್ನು ಸ್ವಚ್ಛಗೊಳಿಸಲಾಯಿತು. ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಕೆ. ಶ್ರೀಹರಿನಾರಾಯಣದಾಸ ಅಸ್ರಣ್ಣ ಇವರು ಚಾಲನೆ ನೀಡಿದರು. ಪ್ರಾಂಶುಪಾಲರಾದ ಡಾ. ವಿಜಯ ವಿ., ಯೋಜನಾಧಿಕಾರಿ ಡಾ. ನಾಗರಾಜ ಬಿ., ಯೂತ್‌ರೆಡ್‌ಕ್ರಾಸ್ ಸಂಯೋಜಕ ಅಶ್ವತ್ಥ್, ವಿದ್ಯಾರ್ಥಿ ನಾಯಕರಾದ ಶಶಾಂಕ್, ಆದಿತ್, ಪ್ರಿಯಾಂಕ, ಮನೀಷ್, ತ್ರಿಶಾ ಶೆಟ್ಟಿ, ತರುಣ್, ಹೇಮಲತಾ, ಸುಕ್ಷಿತ್, ಚೈತ್ರ, ಕಾರ್ತಿಕ್, ಕೃಪಾ ಕಾಲೇಜಿನ ೧೮೦ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.