ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸೇವಾ ಕೌಂಟರ್ ಉದ್ಘಾಟನೆ
Tuesday, January 14, 2025
ಮೂಲ್ಕಿ : ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಷ್ಟ ಬಂದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಶಿಲಾ ಮಹೂರ್ತ ಹಾಗೂ ಸೇವಾ ಕೌಂಟರ್ ನ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕ ಅನಿಲ್ ಸಾಲ್ಯಾನ್ ಅವರು ದೇವಳದಲ್ಲಿ ಮಕರ ಸಂಕ್ರಾಂತಿಯ ಶುಭ ದಿನದಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ತಂತ್ರಿಗಳಾದ ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ಮುಚಿಂತಾಯ, ಯುಗಪುರುಷದ ಭುವನಾಭಿರಾಮ ಉಡುಪ, ದೇವಸ್ಥಾನದ ಆಡಳಿತ ಮುಕ್ತಸರ ಪಟೇಲ್ ವಾಸುದೇವರಾವ್, ಪುರಂದರ ಶೆಟ್ಟಿಗಾರ್ ರವಿ ಶೆಟ್ಟಿ ಪುನರೂರುಗುತ್ತು, ನಾಗೇಶ್ ಬಪ್ಪನಾಡ್, ಚಂದ್ರಶೇಖರ ಸುವರ್ಣ, ದೇವಪ್ರಸಾದ ಪುನರೂರು, ದೇವಳದ ಅರ್ಚಕ ಶಶಾಂಕ್ ಮುಚಿಂತಾಯ, ಶಿಲ್ಪಿ ವಿಷ್ಣುಮೂರ್ತಿ ಭಟ್ ಎಲ್ಲೂರು ಮತ್ತಿತರರು ಉಪಸ್ಥಿತರಿದ್ದರು.