ಪುನರೂರು ಪ್ರತಿಷ್ಠಾನ (ರಿ.) ಇದರ ಉಪಸಮಿತಿ ಜನ ವಿಕಾಸ ಸಮಿತಿ ಮೂಲ್ಕಿಯ ನೂತನ ಅಧ್ಯಕ್ಷರಾಗಿ ಅಕ್ಷತಾ ಶೆಟ್ಟಿ ಆಯ್ಕೆ
ಮೂಲ್ಕಿ:ಪುನರೂರು ಪ್ರತಿಷ್ಠಾನ (ರಿ.) ಇದರ ಉಪಸಮಿತಿ ಜನ ವಿಕಾಸ ಸಮಿತಿ ಮೂಲ್ಕಿಯ ನೂತನ ಅಧ್ಯಕ್ಷರಾಗಿ ಅಕ್ಷತಾ ಶೆಟ್ಟಿ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಪುನರೂರು ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷ ದೇವಪ್ರಸಾದ ಪುನರೂರು ರವರ ಅಧ್ಯಕ್ಷತೆಯಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಆನಂದ ಮೇಲಾಂಟ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ್ ಭಟ್ ದೇಂದಡ್ಕ, ಕಾರ್ಯದರ್ಶಿಗಳಾಗಿ ದಾಮೋದರ ಶೆಟ್ಟಿ ಕೊಡೆತ್ತೂರು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಪಿ. ಎಸ್. ಸುರೇಶ್ ರಾವ್, ಶಶಿಕರ ಕೆರೆಕಾಡು, ಶೋಭಾ ರಾವ್, ಜೀವನ್ ಶೆಟ್ಟಿ, ಗೀತಾ ಶೆಟ್ಟಿ ರವರು ಆಯ್ಕೆಯಾಗಿದ್ದಾರೆ.