
ಸಹಕಾರಿ ಸಂಘದ ಸಾಧಕ ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸಂಸ್ಮರಣಾ ಕಾರ್ಯಕ್ರಮ
Thursday, January 16, 2025
ಹಳೆಯಂಗಡಿ : ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಆಶ್ರಯದಲ್ಲಿ ಸಂಘದ ಪ್ರೇರಣಾಶಕ್ತಿ ಹಾಗೂ ಸಹಕಾರಿ ಸಂಘದ ಸಾಧಕ ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸಂಸ್ಮರಣಾ ಕಾರ್ಯಕ್ರಮ ಸಂಘದ ಸಭಾಭವನದಲ್ಲಿ ಗುರುವಾರದಂದು ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಜ ಕೊಯ್ಕುಡೆ ಶ್ರೀ ವಿಠೋಭ ಭಜನಾ ಮಂದಿರದ ಮಾಜೀ ಅಧ್ಯಕ್ಷ ಕೃಷಿಕ ಸತೀಶ್ ಶೆಟ್ಟಿ ಪಂಜ ಬೈಲಗುತ್ತು ಮಾತನಾಡಿದರು. ಸಂಘದ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಶರತ್ ಶೆಟ್ಟಿ ಪಂಚವಟಿ, ಡಾ.ಗಣೇಶ್ ಅಮೀನ್ ಸಂಕಮಾರ್, ಗೌತಮ್ ಜೈನ್,ಧನಂಜಯ ಮಟ್ಟು, ನವೀನ್ ಸಾಲ್ಯಾನ್ ಪಂಜ,ಸಂದೀಪ್ ಕುಮಾರ್,ಉಮಾನಾಥ್ ಜೆ ಶೆಟ್ಟಿಗಾರ್, ಗಣೇಶ್ ಪ್ರಸಾದ್ ದೇವಾಡಿಗ, ಮಿರ್ಜಾ ಅಹಮದ್, ಶೆರಿಲ್ ಅಯೋನ ಐಮನ್, ಹರೀಶ್ ಎನ್ ಪುತ್ರನ್, ವಿಜಯ್ ಕುಮಾರ್ ಸನಿಲ್, ತನುಜಾ ಶೆಟ್ಟಿ, ಸೊಸೈಟಿ ಪ್ರಬಂಧಕಿ ಅಕ್ಷತಾ ಶೆಟ್ಟಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು . ನಿರಂಜಲ ಪ್ರಾರ್ಥಿಸಿದರು.ವಸಂತ್ ಬೆರ್ನಾಡ್ ಸ್ವಾಗತಿಸಿದರು. ಲಾವಣ್ಯ ಧನ್ಯವಾದವಿತ್ತರು.ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.