
ತೋಕೂರು:ವಿಜೃಂಭಣೆಯ ಧ್ವಜಾರೋಹಣ
Friday, December 6, 2024
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಮಧುಸೂದನ್ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಪ್ರಾರ್ಥನೆ ನಡೆದು ಶ್ರೀ ದೇವರ ಧ್ವಜಾರೋಹಣ, ಮಹಾಪೂಜೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.ಶುಕ್ರವಾರದಂದು
ಕ್ಷೇತ್ರದಲ್ಲಿ ಡಿಸೆಂಬರ್ 6ರಂದು ಪಂಚಮಿ ಉತ್ಸವ ನಡೆಯಿತು.ನಾಳೆ ಡಿಸೆಂಬರ್ 7ರಂದು ವರ್ಷಾವಧಿ ಷಷ್ಟಿ ಮಹೋತ್ಸವ ಪ್ರಯುಕ್ತ ಶ್ರೀ ದೇವರ ರಥೋತ್ಸವ, ಮಹಾ ಅನ್ನಸಂಪರ್ಪಣೆ ನಡೆಯಲಿದೆ.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ ಎಸ್ ಪೂಜಾರಿ, ಮಾಜಿ ಅಧ್ಯಕ್ಷ ಹರಿದಾಸ್ ಭಟ್,ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಕುಮಾರ್ ಶೆಟ್ಟಿ ತೋಕೂರು ಗುತ್ತು, ಸವಿತಾ ಶರತ್ ಬೆಳ್ಳಾಯರು, ಅಶೋಕ್ ಕುಂದರ್, ವಿಶ್ವನಾಥ, ಭಾಸ್ಕರ ದೇವಾಡಿಗ, ಶೋಭಾ ವಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.