ದಾನಿಗಳ ನೆರವಿನಿಂದ ಶ್ರೀಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಊಟದ ಸ್ಟೀಲ್ ಬಟ್ಟಲಿನ ಕೊಡುಗೆ
Thursday, December 12, 2024
ತೋಕೂರು:ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ,ಷಷ್ಠಿ ಮಹೋತ್ಸವದ ಪ್ರಯುಕ್ತ ಜರುಗಿದ 28 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾನಿಗಳ ನೆರವಿನಿಂದ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ 510 ಊಟದ ಸ್ಟೀಲ್ ಬಟ್ಟಲುಗಳ್ಳನ್ನು(ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ) ದೇವಸ್ಥಾನಕ್ಕೆ ಅರ್ಪಿಸಲಾಯಿತು.
ದಾನಿಗಳಾದ ಹರಿಪ್ರಸಾದ್ ಜಿ.ಶೆಟ್ಟಿ ಬೆಂಗಳೂರು, ಮನೋಜ್ ಕುಮಾರ್ ಕೆರೆಕಾಡು,ಶ್ರೀಮತಿ ಆಶಾ ಪಾಟೀಲ್ ಬೆಂಗಳೂರು,ಡಾ.ಗಣರಾಜ್ ಭಾಸ್ಕರ್ ದುಬೈ, ರಾಜು ಸುರತ್ಕಲ್, ಸಂತೋಷ್ ಜಿ.ದೇವಾಡಿಗ, ಬೆಂಗಳೂರು, ಕಿರಣ್ ಕುಮಾರ್ ದುಬೈ, ನವೀನ್ ಸುವರ್ಣ ಮುಂಬೈ ಇವರುಗಳ ನೆರವಿನಿಂದ,ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ 510 ಊಟದ ಸ್ಟೀಲ್ ಬಟ್ಟಲುಗಳ್ಳನ್ನು(ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ) ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ, ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ವಿಶ್ವನಾಥ್,ಸಂಪತ್ ಕುಮಾರ್ ಶೆಟ್ಟಿ,ತೋಕೂರು ಗುತ್ತು ಭಾಸ್ಕರ್ ದೇವಾಡಿಗ,ಶ್ರೀಮತಿ ಸವಿತಾ ಶರತ್ ಬೆಳ್ಳಾಯರು ಇವರ ಉಪಸ್ಥಿತಿಯಲ್ಲಿ, ದೇವಸ್ಥಾನದ ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿ , ಸಮಿತಿ ಸದಸ್ಯರು ಹಾಗೂ ಪ್ರಧಾನ ಅರ್ಚಕ ಟಿ.ಕೆ ಮಧುಸೂದನ ಆಚಾರ್ಯ ರವರ ಶುಭಾರ್ಶೀವಾದದೊಂದಿಗೆ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.ಈ ಸಂದರ್ಭವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಯೋಗೀಶ್ ಕೋಟ್ಯಾನ್, ಸ್ಪೋರ್ಟ್ಸ್ ಕ್ಲಬ್ ನ ಮಾರ್ಗದರ್ಶಕ ದಿನಕರ ಸಾಲ್ಯಾನ್ ಲೈಟ್ ಹೌಸ್, ರಮೇಶ್ ಅಮೀನ್ ಮುಂಬೈ, ನರೇಂದ್ರ ಕೆರೆಕಾಡು, ಗಣೇಶ್ ಕುಮಾರ್ ಬೆಂಗಳೂರು, ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್,ಅಧ್ಯಕ್ಷ ದೀಪಕ್ ಸುವರ್ಣ,ಉಪಾಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ,ಕೋಶಾಧಿಕಾರಿ ಸುನಿಲ್ ಜಿ ದೇವಾಡಿಗ,ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ,ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ,ಸದಸ್ಯರಾದ ಸುರೇಶ್ ಶೆಟ್ಟಿ, ಚಂದ್ರಶೇಖರ ದೇವಾಡಿಗ, ಪ್ರಸಾದ್ ಕೆ.ಆಚಾರ್ಯ, ಗೌತಮ್ ಬೆಲ್ಚಡ, ಪ್ರಸಾದ್ ಪೂಜಾರಿ, ರಾಜ ಸಾಲ್ಯಾನ್,ಜಯಂತ್ ಅಮೀನ್ ಸಂಕಲ ಕರಿಯ, ಗಣೇಶ್ ದೇವಾಡಿಗ ಪಂಜ, ರಮೇಶ್ ಕರ್ಕೇರ, ಪ್ರಮೋದ್ ಆಚಾರ್ಯ, ಪದ್ಮನಾಭ ಕುಲಾಲ್, ಶಂಕರ್ ಪೂಜಾರಿ, ದುರ್ಗಾ ದಾಸ್ ಕುಲಾಲ್, ಸಂಪತ್ ದೇವಾಡಿಗ, ಮಹೇಶ್ ಬೆಲ್ಚಡ, ದಯಾನಂದ ಕೋಟ್ಯಾನ್, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ, ಸದಸ್ಯೆಯಾರಾದ ಶ್ರೀಮತಿ ಸರಿತಾ ರಮೇಶ್,ಶ್ರೀಮತಿ ಮೀನಾಕ್ಷಿ ಸುನಿಲ್,ಶ್ರೀಮತಿ ವೀಣಾ ಪ್ರಶಾಂತ್,ಶ್ರೀಮತಿ ಅಕ್ಷತಾ ಪದ್ಮನಾಭ,ಶ್ರೀಮತಿ ಉಷಾ,ಕುಮಾರಿ ಶಿವಾನಿ ದೇವಾಡಿಗ,ಕುಮಾರಿ ಭುವನ ಕುಲಾಲ್,ಕುಮಾರಿ ಭೂಮಿಕ ಕುಲಾಲ್, ಹಾಗೂ ಶ್ರೀಮತಿ ಮೋಹಿನಿ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.