ಡಿ.29 :ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಶಿಲಾಮಯ ಧ್ವಜಸ್ತಂಭ ಮೆರವಣಿಗೆ
Saturday, December 28, 2024
ಸಸಿಹಿತ್ಲು: ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶಿಲಾಮಯ ಧ್ವಜಸ್ತಂಭದ ಮೆರವಣಿಗೆ ಡಿ.29 ಭಾನುವಾರ ಮದ್ಯಾಹ್ನ 3 ಗಂಟೆಗೆ ಮುಕ್ಕದಿಂದ ಹೊರಡಲಿದೆ.
ವಾದ್ಯ, ಕೊಂಬು ಕಹಳೆ , ಕುಣಿತ ಭಜನೆ ಚೆಂಡೆ ವಾದನದೊಂದಿಗೆ ಹೊರಡುವ ಶಿಲಾಮಯ ಧ್ವಜಸ್ತಂಭದ ಮೆರವಣಿಗೆ ಸಂಜೆ ಶ್ರೀ ಕ್ಷೇತ್ರ ತಲುಪಲಿದೆ. ಈ ಮೆರವಣಿಗೆಯಲ್ಲಿ ಭಕ್ತ ಬಾಂಧವೆರೆಲ್ಲ ಭಾಗವಹಿಸಿ ಕಾರಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆ, ಉಳ್ಳಾಯ ಮತ್ತು ಪರಿವಾರ ದೈವಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂಬೈ ಸಮಿತಿ, ಮಹಿಳಾ ಸಮಿತಿ, ಹೊರನಾಡು ಸಮಿತಿ ಹಾಗೂ ನಾಲ್ ಕರೆಯ ಹತ್ತು ಸಮಸ್ತರು ಮನವಿ ಮಾಡಿದ್ದಾರೆ.