-->


ಕಟೀಲು : ನಾರಾಯಣಗುರುಗಳ ನೂತನ ಮಂದಿರ ಲೋಕಾರ್ಪಣೆ

ಕಟೀಲು : ನಾರಾಯಣಗುರುಗಳ ನೂತನ ಮಂದಿರ ಲೋಕಾರ್ಪಣೆ

ಕಟೀಲು : ನಾರಾಯಣಗುರುಗಳ ನೂತನ ಮಂದಿರ ಲೋಕಾರ್ಪಣೆ
ಕಟೀಲು : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಟೆ ಹಾಗೂ ಕುಂಭಾಭಿಷೇಕ ತಾ. ೨೫ರ ಬುಧವಾರ ಮನೋಜ್ ತಂತ್ರಿ, ಹೆಜಮಾಡಿ ಮಹೇಶ ಶಾಂತಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ.
ತಾ.೨೨ರಂದು ನಾರಾಯಣಗುರುಗಳ ಮೂರ್ತಿಯ ಮೆರವಣಿಗೆ ಹಾಗೂ ಹೊರೆಕಾಣಿಕೆ ಸಮರ್ಪಣೆ, ತಾ. ೨೩ರಂದು ನೂತನ ಬಿಂಬ ಆಲಯ ಪ್ರವೇಶ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ತಾ.೨೪ರಂದು ಗುರುಪೂಜೆ, ಗಣಹೋಮ, ತಾ. ೨೫ರಂದು ಕುಂಭಾಭಿಷೇಕ ನಡೆಯಲಿದೆ. ಅಂದು ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಖ್ಯಾತಾನಾಂದ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಸೀನ ಸ್ವಾಮಿ, ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬಿ.ಕೆ.ಹರಿಪ್ರಸಾದ್, ಎಚ್.ಎಸ್. ಸಾಯಿರಾಮ್, ಡಾ. ರಾಜಶೇಖರ ಕೋಟ್ಯಾನ್ ಮುಂತಾದವರು ಭಾಗವಹಿಸಲಿದ್ದಾರೆ. ಥಂಡರ್ ಗೈಸ್ ಫೌಂಡೇಶನ್‌ನ ಕಲಾವಿದರಿಂದ ಕ್ಷೇತ್ರ ಪುರಾಣ ಮಂಜರಿ ಭಕ್ತಿಭಾವದ ನೃತ್ಯಸಂಗಮ, ಕಲಾಕುಂಭ ಕುಳಾಯಿ ಕಲಾವಿದರಿಂದ ಪರಮಾತ್ಮೆ ಪಂಜುರ್ಲಿ ತುಳುನಾಟಕ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article