ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋನಾಲ್ಡ್ ಫೆರ್ನಾಂಡಿಸ್ ಅವರಿಗೆ ಪೆರ್ಮುದೆ ಚರ್ಚ್ ವತಿಯಿಂದ ಅಭಿನಂದನಾ ಕಾರ್ಯಕ್ರಮ
Monday, November 4, 2024
ಬಜಪೆ:ಕ್ಷಷಿ ಕ್ಷೇತ್ರದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಸಮಾಜ ಸೇವಕ,ಕೃಷಿಕ ರೋನಾಲ್ಡ್ ಪಿಂಟೋ ಪೆರ್ಮುದೆ ಅವರನ್ನು ಪೆರ್ಮುದೆ ಚರ್ಚ್ ನ ವತಿಯಿಂದ ಅಭಿನಂದಿಸಲಾಯಿತು.ಚರ್ಚ್ ನ ಧರ್ಮಗುರುಗಳಾದ ವಂದನೀಯ ರೋನಾಲ್ಡ್ ಪಿಂಟೋ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋನಾಲ್ಡ್ ಫೆರ್ನಾಂಡಿಸ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಶುಭಹಾರೈಸಿದರು. ಕೆಥೊಲಿಕ್ ಸಭಾ ಅಧ್ಯಕ್ಷ ರೋಶನ್ ತಾವ್ರೋ ಅವರು ಸನ್ಮಾನ ಪತ್ರ ವಾಚಿಸಿದರು.ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಹೆನ್ರಿ ಡಿ ಕುನ್ನ ಸ್ವಾಗತಿಸಿದರು. ಸಂಯೋಜಕ ವಿನೋದ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.