-->


ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆಯ ಸರಕಾರ - ಶಾಸಕ ಉಮಾನಾಥ ಕೋಟ್ಯಾನ್

ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆಯ ಸರಕಾರ - ಶಾಸಕ ಉಮಾನಾಥ ಕೋಟ್ಯಾನ್

ಮೂಲ್ಕಿ: ರಾಜ್ಯದಲ್ಲಿ ಅಲ್ಪಸಂಖ್ಯಾತರ ಬಗ್ಗೆ ವಿಶೇಷವಾದ ಒಲವನ್ನು ಹೊಂದಿರುವಂತಹ ಕಾಂಗ್ರೆಸ್ ಸರ್ಕಾರ ಇಂದು ವಕ್ಫ್ ಬೋರ್ಡ್ ಮೂಲಕ ಮುಸ್ಲಿಂರ ತುಷ್ಟಿಕರಣದ ವಿರುದ್ಧ ಹೋರಾಟ ನಡೆಸಲಾಗುತ್ತದೆ. ರೈತರ, ದೇವಸ್ಥಾನ, ಮಠಗಳನ್ನು ಆಸ್ತಿಯೆಂದು ನಮೂದಿಸಿರುವುದನ್ನು  ಬದಲಾಯಿಸಿ ಅಕ್ರಮವಾಗಿ ವಕ್ಫ್ ಬೋರ್ಡ್ ಎಂದು ದಾಖಲಿಸುವ ಕರ್ನಾಟಕ ಸರ್ಕಾರದ ಅನೀತಿಯ ವಿರುದ್ಧ ನವೆಂಬರ್ ೪ರಂದು ಉಗ್ರವಾದ ಪ್ರತಿಭಟನೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಉಮಾನಾಥ ಕೊಟ್ಯಾನ್ ಹೇಳಿದರು. 
ಅವರು ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಇಡೀ ರಾಜ್ಯದಲ್ಲಿ ಆಸ್ತಿ ಕಬಳಿಕೆ ಸಮಸ್ಯೆ ಉದ್ಭವಿಸಿದೆ ಮೊದಲು ವಿಜಯಪುರ ಜಿಲ್ಲೆಯ ಸಮಸ್ಯೆ ಅಂದುಕೊಂಡಿದ್ದರು ಇದೀಗ ಚನ್ನಪಟ್ಟಣ ಧಾರವಾಡ ಬೀದರ್ ಮಂಡ್ಯದ ನಾಗಮಂಗಲ ಕೊಪ್ಪಳ ಜಿಲ್ಲೆ ಹೀಗೆ ದಿನ ಕಳೆದಂತೆ ಇದು ಹಬ್ಬುತ್ತ ಸಾಗಿದೆ ಇಂದಲ್ಲ ನಾಳೆ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಜಮೀನಿಗೂ ಸಹ ಕಣ್ಣು ಹಾಕಲಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 
ಇಂತಹ ಅನಾಹುತ ತಡೆಯಲು ವಕ್ಫ್ ಬೋರ್ಡ್ ತಿದ್ದುಪಡಿಗೆ ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ಮಾಡಿದೆ ಇದನ್ನು ಸಿದ್ದರಾಮಯ್ಯನವರು ಅವರ ಸರ್ಕಾರದ ಸಚಿವರು ಸ್ವಾಗತಿಸಬೇಕು. ರೈತರಿಗೆ ನೀಡಿದ ನೋಟಿಸನ್ನು ವಾಪಸ್ ಪಡೆಯಲಿ ರೈತರ ಜಮೀನನ್ನ ಮರಳಿಸಲಿ ಎಂದು ತೀವ್ರವಾಗಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯ ಶೈಲೇಶ್‌ಕುಮಾರ್,  ವಿಠಲ ಕೆ.ಎಸ್.ರಾವ್ ನಗರ, ಹರಿಪ್ರಸಾದ್ ಶೆಟ್ಟಿ ಸುಭಾಷ್ ಶೆಟ್ಟಿ, ಮೂಡಬಿದ್ರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಇದ್ದರು.

Ads on article

Advertise in articles 1

advertising articles 2

Advertise under the article