ಉಪಚುನಾವಣೆಯಲ್ಲಿ ಭರ್ಜರಿ ಜಯ,ಬಜ್ಪೆ ಪ್ರಜಾಪ್ರತಿನಿಧಿ ವತಿಯಿಂದ ವಿಜಯೋತ್ಸವ
Sunday, November 24, 2024
ಬಜಪೆ:ರಾಜ್ಯದಲ್ಲಿ ನಡೆದ 3 ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಿರುವ ಹಿನ್ನಲೆಯಲ್ಲಿ ಬಜ್ಪೆ ಪ್ರಜಾಪ್ರತಿನಿಧಿ ವತಿಯಿಂದ ಬಜಪೆಯಲ್ಲಿ ವಿಜಯೋತ್ಸವನ್ನು ಆಚರಿಸಲಾಯಿತು . ಪ್ರಜಾಪ್ರಧಿನಿಧಿ ಅಧ್ಯಕ್ಷ ಬಿ ಜೆ ರಹೀಮ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ , ಪ್ರಜಾ ಪ್ರತಿನಿಧಿ ಉಪಾಧ್ಯಕ್ಷ ಹನೀಫ್ ಹಿಲ್ ಟಾಪ್ ,ಶೇಖರ್ ಗೌಡ ,ಕಾಂಗ್ರೆಸ್ ಮುಖಂಡ ಜೇಕಬ್ ಪಿರೇರಾ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶರೀಫ್ ಬಜ್ಪೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡರು.