-->


ಮುಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಕಂಬಳ ಯಶಸ್ವಿಗೊಳಿಸಿ- ದುಗ್ಗಣ್ಣ ಸಾವಂತರು

ಮುಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಕಂಬಳ ಯಶಸ್ವಿಗೊಳಿಸಿ- ದುಗ್ಗಣ್ಣ ಸಾವಂತರು

ಮೂಲ್ಕಿ:ಮುಲ್ಕಿ ಸೀಮೆ ಅರಸು ಕಂಬಳ ಡಿ .22 ರಂದು ನಡೆಯಲಿದ್ದು ಕಂಬಳದ ಪೂರ್ವಭಾವಿಯಾಗಿ ವಿವಿಧ ಕಾರ್ಯಗಳು ಮತ್ತು ಸಂಘ ಸಂಸ್ಥೆಯಿಂದ ನಡೆಯುವಂತಹ ಶ್ರಮದಾನಗಳು ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಗುರುವಾರದಂದು ಪಡುಪಣಂಬೂರು ಮುಲ್ಕಿ ಅರಮನೆ ಬಸದಿ ದೇವರು ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಅರ್ಚಕ ಬಾಬು ಇಂದ್ರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.
ಬಳಿಕ ಕಂಬಳದ ಕರೆಗೆ ಪ್ರಸಾದ ಹಾಕುವ ಮೂಲಕ ಮುಲ್ಕಿ ಸೀಮೆ ಅರಸು ಕಂಬಳದ ಪೂರ್ವಭಾವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ಈ ಸಂದರ್ಭ ಮಾತನಾಡಿದ ಮುಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರು  ಅವರು ಸೀಮೆಯ ಪ್ರತಿಷ್ಠಿತ ಅರಸು ಕಂಬಳ ಯಶಸ್ವಿಗೊಳಿಸಲು ಸಹಕಾರ ಅಗತ್ಯ ಎಂದರು. 
ಈ ವೇಳೆ ವಕೀಲ ಚಂದ್ರಶೇಖರ್ ಕಾಸಪ್ಪಯನವರ ಮನೆ, ನವೀನ್ ಶೆಟ್ಟಿ, ಎಡ್ಮೆ ಮಾರ್, ವಸಂತ್ ಬೆರ್ನಾರ್ಡ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಚಂದ್ರ ಕುಮಾರ್ ಸಸಿಹಿತ್ಲು, ಮಹೀಮ್ ಹೆಗ್ಡೆ ಬಪ್ಪನಾಡು, ಮಾಧವ ಶೆಟ್ಟಿ ಉತ್ರಂಜೆ, ಉದಯ ಬೆರ್ನಾರ್ಡ್, ನವೀನ್ ಪುತ್ರನ್, ವಿಜಯಕುಮಾರ್ ಶೆಟ್ಟಿ ಕೋಲ್ನಾಡ್, ಸತೀಶ್, ಸುಧೇಶ್ ಕುಮಾರ್, ಸುಧೀರ್ ಶೆಟ್ಟಿ ಶಿಮಂತೂರು, ಧರ್ಮಾನಂದ ಶೆಟ್ಟಿಗಾರ್, ಗೌತಮ್ ಜೈನ್ ಮುಲ್ಕಿ ಅರಮನೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article