ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಲ್ಕಿ ತಾಲೂಕು ಶಾಖೆಗೆ ನಿರ್ದೇಶಕರ ಅವಿರೋಧ ಆಯ್ಕೆ
Tuesday, October 22, 2024
ಮುಲ್ಕಿ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಲ್ಕಿ ತಾಲೂಕು ಶಾಖೆಗೆ ನಡೆದ 2024-29 ನೇ ಸಾಲಿನ ನಿರ್ದೇಶಕರ ಚುನಾವಣೆಯ 14 ಸ್ಥಾನಕ್ಕೆ 19 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಒಬ್ಬರು ನಾಮಪತ್ರ ಹಿಂದೆ ಪಡೆದಿದ್ದು ಮತ್ತು 4 ನಾಮಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕಾರಗೊಂಡು 14 ಸ್ಥಾನಕ್ಕೆ ಈ ಕೆಳಗಿನವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಲ್ಕಿ ತಾಲೂಕು ಶಾಖೆಯ ಚುನಾವಣಾಧಿಕಾರಿ ಶ್ರೀಮತಿ ರೋಸಿ ಫೆರ್ನಾಂಡಿಸ್ ಪ್ರಕಟಿಸಿದ್ದಾರೆ.
ಡಾ. ವಿಶ್ವರಾಧ್ಯ ಟಿ.ಎಂ (ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ) ಜಿ.ಎಸ್. ದಿನೇಶ್ (ಕಂದಾಯ ಇಲಾಖೆ) ಜಯರಾಮ, ಕ್ಲೋಟಿಲ್ದಾ ಲೋಬೋ ಮತ್ತು ವಸಂತಿ ಕುಮಾರಿ (ಸರ್ಕಾರಿ ಪ್ರಾಥಮಿಕ ಶಾಲೆಗಳು), ಶರ್ಲಿ ಸುಮಾಲಿನಿ, ಡೇವಿಡ್ ಧರ್ಮಪಾಲ್ (ಸರ್ಕಾರಿ ಪ್ರೌಢಶಾಲೆಗಳು) ಆನೀಲ್ ವಿ ಚೆರಿಯಾನ್, ಡಾ. ವಾಸುದೇವ ಬಿ. (ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳು) ರೇಖಾನಾಯ್ಕ, ಸುಜಾತ ಮತ್ತು ಶಾಂತಿ ಫರ್ನಾಂಡಿಸ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಅರುಣ್ ಪ್ರದೀಪ್ ಡಿಸೋಜಾ ಮತ್ತು ಮಂಜುನಾಥ (ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ)